Home » ಪ್ರವೀಣ್ ನೆಟ್ಟಾರು ಹತ್ಯೆ : ಬಂಧಿತ ಆರೋಪಿಗಳಾದ ನೌಫಾಲ್,ಆಬಿದ್ ಗೆ ನ್ಯಾಯಾಂಗ ಬಂಧನ

ಪ್ರವೀಣ್ ನೆಟ್ಟಾರು ಹತ್ಯೆ : ಬಂಧಿತ ಆರೋಪಿಗಳಾದ ನೌಫಾಲ್,ಆಬಿದ್ ಗೆ ನ್ಯಾಯಾಂಗ ಬಂಧನ

by Praveen Chennavara
0 comments

ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆಗಸ್ಟ್ 7 ರಂದು ಬಂಧನಕ್ಕೊಳಗಾಗಿದ್ದ ಮತ್ತಿಬ್ಬರು ಆರೋಪಿಗಳನ್ನು ಪುತ್ತೂರು ಡಿ ವೈ ಎಸ್ ಪಿ ಡಾ. ಪಿ ಗಾನಾ ಕುಮಾರ್ ಅವರ ನೇತೃತ್ವದಲ್ಲಿ ಸೋಮವಾರ ಸಂಜೆ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಹತ್ಯೆ ಘಟನೆಗೆ ಸಂಬಂಧಿಸಿ ಆರೋಪಿಗಳಾದ ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಾಲ್, ಮತ್ತು ಸುಳ್ಯ ನಾವೂರು ನಿವಾಸಿ ಆಬಿದ್ ಎಂಬವರನ್ನು ನಿನ್ನೆ ಪೊಲೀಸರು ಬಂಧಿಸಿದ್ದರು.

ಸೋಮವಾರ ಬೆಳಿಗ್ಗೆ ಇವರನ್ನು ಸುಳ್ಯ ಮತ್ತು ಬೆಳ್ಳಾರೆಯ ಎಸ್ ಡಿ ಪಿ ಐ ಕಚೇರಿಗೆ ಹಾಗೂ ಸುಳ್ಯ ಮತ್ತು ಬೆಳ್ಳಾರೆಯ ಕೆಲವು ಕಡೆಗಳಲ್ಲಿ ಮಹಜರು ನಡೆಸಿ ಸಂಜೆ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ವಿಚಾರಣೆ ನಡೆಸಿದ ಕಿರಿಯ ಸಿವಿಲ್ ನ್ಯಾಯಾಧೀಶೆ ಕು. ಅರ್ಪಿತಾರವರು ಆರೋಪಿಗಳಿಗೆ ಇಂದಿನಿಂದ ಆಗಸ್ಟ್ 12 ರವರೆಗೆ ನಾಲ್ಕು ದಿನಗಳ ನ್ಯಾಯಾಂಗ ಬಂಧನ ಆದೇಶ ನೀಡಿರುವುದಾಗಿ ತಿಳಿದು ಬಂದಿದೆ.

You may also like

Leave a Comment