Home » ಪ್ರವೀಣ್ ನೆಟ್ಟಾರು ಹತ್ಯೆ : ಮತ್ತಿಬ್ಬರ ಬಂಧನ, ಬಂಧಿತರ ಸಂಖ್ಯೆ 6ಕ್ಕೆ ಏರಿಕೆ

ಪ್ರವೀಣ್ ನೆಟ್ಟಾರು ಹತ್ಯೆ : ಮತ್ತಿಬ್ಬರ ಬಂಧನ, ಬಂಧಿತರ ಸಂಖ್ಯೆ 6ಕ್ಕೆ ಏರಿಕೆ

by Praveen Chennavara
0 comments

ಸುಳ್ಯ : ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು
ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸುಳ್ಯ ನಾವೂರು ನಿವಾಸಿ ಅಬೀದ್, ಬೆಳ್ಳಾರೆ ಗೌರಿಹೊಳೆ ಬಳಿಯ ನಿವಾಸಿ ನೌಫಾಲ್ ಎಂದು ಗುರುತಿಸಲಾಗಿದೆ.

ಈಗಾಗಲೇ ಬೆಳ್ಳಾರೆಯ ಮತ್ತು ಸವಣೂರಿನ ಝಾಕಿರ್, ಶಫೀಕ್ ಮತ್ತು ಸದ್ದಾಂ, ಹ್ಯಾರೀಸ್ ಎಂಬವರನ್ನು ಬಂಧಿಸಲಾಗಿದೆ. ಇಲ್ಲಿಯತನಕ ಒಟ್ಟು ಆರು ಮಂದಿಯ ಆರೋಪಿಗಳ ಬಂಧನವಾಗಿದೆ. ಬಂಧಿತ ಆರೋಪಿಗಳ ಪಾತ್ರ ಈ ಕೊಲೆಯಲ್ಲಿ ಏನಿತ್ತು ಎನ್ನುವುದು ಇನ್ನೂ ನಿಗೂಢವಾಗಿದೆ. ಈಗ ಬಂಧಿತ ಅಬಿದ್ 22 ವರ್ಷದ ಹುಡುಗ, ಮತ್ತೋರ್ವ ಬಂಧಿತ ನೌಫಾಲ್ 28 ವರ್ಷದವನು ಎನ್ನಲಾಗಿದೆ.

You may also like

Leave a Comment