Home » ಪುತ್ತೂರು : 50 ರೂಪಾಯಿ ನೀಡಿಲ್ಲವೆಂದು ಹಲ್ಲೆ | ಹರಿತವಾದ ಆಯುಧದಿಂದ ಕಾಲಿಗೆ ಚುಚ್ಚಿದ

ಪುತ್ತೂರು : 50 ರೂಪಾಯಿ ನೀಡಿಲ್ಲವೆಂದು ಹಲ್ಲೆ | ಹರಿತವಾದ ಆಯುಧದಿಂದ ಕಾಲಿಗೆ ಚುಚ್ಚಿದ

by Praveen Chennavara
0 comments

ಪುತ್ತೂರು: ರೂ.50 ರೂಪಾಯಿ ನೀಡಿಲ್ಲ ಎಂದು ಕೂಲಿ ಕಾರ್ಮಿಕರೊಬ್ಬರು ಹರಿತವಾದ ಸಾಧನದಿಂದ ಚುಚ್ಚಿ ಹಲ್ಲೆ ನಡೆಸಿದ್ದಾರೆಂದು ಆರೋಪಕ್ಕೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗದಗ ಜಿಲ್ಲೆಯ ರಣತ್ತೂರು ಗ್ರಾಮದ ಸಿರಹಟ್ಟಿ ನಿವಾಸಿ ಹನುಮಂತ ಸ್ವಾಗಿಹಳ್ಳ(26ವ)ರವರು ಹಲ್ಲೆಗೊಳಗಾದವರು. ಅವರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ತಂದೆ ಮಹಾದೇವಪ್ಪ ಮತ್ತು ದೊಡ್ಡಪ್ಪನ ಮಗ ಬಸಪ್ಪ ಹಾಗು ಪರಿಚಯದ ಮರಿಯಪ್ಪ ಎಂಬವರ ಜೊತೆ ಕುಳಿತಿರುವಾಗ ಅಲ್ಲಿಗೆ ಬಂದ ಅವಿನಾಶ್ ಎಂಬವರು ರೂ. 50 ಕೊಡುವಂತೆ ಹನುಮಂತರಲ್ಲಿ ಕೇಳಿದ್ದರು.

ಈ ವೇಳೆ ಹನುಮಂತ ಹಣ ಇಲ್ಲ ಎಂದಾಗ ಅವಿನಾಶ್ ಅವರು ಕೋಪಗೊಂಡು ಹಲ್ಲೆ ನಡೆಸಿ ಹರಿತವಾದ ಸಾಧನದಿಂದ ಹನುಮಂತ ಅವರ ಬಲಕಾಲಿಗೆ ಚುಚ್ಚಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment