Home » ಪುತ್ತೂರು : ಹಣ ಕೇಳಿದಾಗ ಕೊಡದ ಅಣ್ಣನಿಗೆ ಕತ್ತಿಯಿಂದ ಹಲ್ಲೆ ಮಾಡಿದ ತಮ್ಮ

ಪುತ್ತೂರು : ಹಣ ಕೇಳಿದಾಗ ಕೊಡದ ಅಣ್ಣನಿಗೆ ಕತ್ತಿಯಿಂದ ಹಲ್ಲೆ ಮಾಡಿದ ತಮ್ಮ

by Praveen Chennavara
0 comments

ಪುತ್ತೂರು:ವ್ಯಕ್ತಿಯೋರ್ವರಿಗೆ ತಮ್ಮನೇ ಕತ್ತಿಯಿಂದ ಹಲ್ಲೆ ನಡೆಸಿರುವ ಘಟನೆ ಚಿಕ್ಕಮುನ್ನೂರು ಗಡಿಕಲ್ಲು ಎಂಬಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಗಡಿಕಲ್ಲು ದಿ.ಮಾಧವ ಎಂಬವರ ಮಗ ಶಿವಪ್ಪ(45 ವ.)ಎಂಬವರಿಗೆ ಅವರ ತಮ್ಮ ಬಾಲಕೃಷ್ಣ ಕತ್ತಿಯಿಂದ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.

ಎ.27ರಂದು ಸಂಜೆ ಗಡಿಕಲ್ಲುವಿನಲ್ಲಿರುವ ನನ್ನ ತಂಗಿ ಭವಾನಿಯ ಮನೆಗೆ ಹೋಗಿ ತಂಗಿ ಮತ್ತು ಬಾವನೊಂದಿಗೆ ಮಾತನಾಡುತ್ತಿರುವ ಸಮಯ ತಮ್ಮ ಬಾಲಕೃಷ್ಣ ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಬಂದು ತನಗೆ ಹಣ ಕೊಡು ಎಂದು ಕೇಳಿದ.ಆದರೆ ತನ್ನಲ್ಲಿ ಹಣವಿಲ್ಲ ಎಂದು ನಾನು ಹೇಳಿದಾಗ, ಈ ಮಲ್ಲ ಜನನಾ? ಎಂದು ಬೈದು ಕೈಯಲ್ಲಿದ್ದ ಕತ್ತಿಯಿಂದ ನನ್ನ ಕುತ್ತಿಗೆಯ ಎಡಭಾಗಕ್ಕೆ ಹಾಗೂ ಹಣೆಯ ಎಡ ಭಾಗಕ್ಕೆ ಏಕಾಎಕಿಯಾಗಿ ಹಲ್ಲೆ ನಡೆಸಿ ರಕ್ತ ಗಾಯಗೊಳಿಸಿರುವುದಾಗಿ’ ಶಿವಪ್ಪ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗಾಯಾಳು ಶಿವಪ್ಪ ಅವರು ಪುತ್ತೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ಆರೋಪಿ ವಿರುದ್ಧ ಪೊಲೀಸರು ಕಲಂ 504, 324ಐ.ಪಿ.ಸಿಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

You may also like

Leave a Comment