Home » ಪುತ್ತೂರು : ಗ್ರಾ.ಪಂ.ಮಾಜಿ ಸದಸ್ಯ ಹಾಗೂ ತಾಯಿಯ ಕಟ್ಟಿ ಹಾಕಿ ನಗದು ,ಚಿನ್ನಾಭರಣ ದರೋಡೆ

ಪುತ್ತೂರು : ಗ್ರಾ.ಪಂ.ಮಾಜಿ ಸದಸ್ಯ ಹಾಗೂ ತಾಯಿಯ ಕಟ್ಟಿ ಹಾಕಿ ನಗದು ,ಚಿನ್ನಾಭರಣ ದರೋಡೆ

by Praveen Chennavara
2 comments

Puttur: ಪುತ್ತೂರು (Puttur) ತಾಲೂಕಿನ ಬಡಗನ್ನೂರು ಗ್ರಾ.ಪಂ ನ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ ಎಂಬವರ ಮನೆಗೆ ನುಗ್ಗಿದ ದರೋಡೆಕೋರರ ಗುಂಪು ಚಿನ್ನ ಮತ್ತು ನಗದು ಲೂಟಿ ಮಾಡಿರುವ ಘಟನೆ ಸೆ.6ರ ತಡರಾತ್ರಿ ನಡೆದಿದೆ.

ಬಡಗನ್ನೂರು ಗ್ರಾಮದ ತೋಟದ ನಡುವೆ ಒಂಟಿಯಾಗಿರುವ ಮನೆಯಲ್ಲಿ ಗುರುಪ್ರಸಾದ್ ರೈ ಮತ್ತು ಅವರ ತಾಯಿ ಕಸ್ತೂರಿ ರೈ ಮಾತ್ರವಿದ್ದು 7 ರಿಂದ 8 ಜನರಿದ್ದ ದರೋಡೆಕೋರರ ಗುಂಪು ಕೈಯಲ್ಲಿ ತಲವಾರು ಮತ್ತು ರಾಡ್ ನಂತಹ ಮಾರಕಾಸ್ತ್ರ ಹಿಡಿದು ಮನೆಗೆ ನುಗ್ಗಿ ಜೀವಬೆದರಿಕೆಯೊಡ್ಡಿ ತಾಯಿ ಮಗನನ್ನು ಕಂಬಕ್ಕೆ ಕಟ್ಟಿಹಾಕಿ ನಗದು ಮತ್ತು ಚಿನ್ನಾಭರಣ ದೋಚಿದೆ.

ಗುರುತು ಸಿಗದಂತೆ ಮುಖವಾಡ ಧರಿಸಿ ಬಂದಿದ್ದ ದರೋಡೆಕೋರರ ಗುಂಪು, ಗುರುಪ್ರಸಾದ್ ರೈ ಯಾರನ್ನೂ ಸಂಪರ್ಕಿಸದಂತೆ ಅವರ ಮೊಬೈಲನ್ನು ನೀರಿಗೆ ಹಾಕಿದ್ದರು ಎನ್ನಲಾಗಿದೆ. ಅದು ಹೇಗೋ ಗುರುಪ್ರಸಾದ್ ರೈ ಸಂಪ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು, ಬೆರಳಚ್ಚು ತಜ್ಞರು,ಶ್ವಾನದಳ, ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಸೌಜನ್ಯ ಹೋರಾಟದ ಪರ ಹಾಕಿದ್ದ ಬ್ಯಾನರ್!! ರಾತ್ರೋ ರಾತ್ರಿ ಕಿತ್ತೆಸೆದ ಕಿಡಿಗೇಡಿಗಳು

You may also like

Leave a Comment