Home » ಪುತ್ತೂರು ತಾ.ಪಂ.ನಲ್ಲಿ ರೆಕಾರ್ಡ್ ರೂಂ ನಿರ್ವಹಣೆ ಉದ್ಯೋಗಿ ಹರೀಶ್ ಕರ್ಕುಂಜ ನಿಧನ

ಪುತ್ತೂರು ತಾ.ಪಂ.ನಲ್ಲಿ ರೆಕಾರ್ಡ್ ರೂಂ ನಿರ್ವಹಣೆ ಉದ್ಯೋಗಿ ಹರೀಶ್ ಕರ್ಕುಂಜ ನಿಧನ

by ಹೊಸಕನ್ನಡ
0 comments

Puttur: ಕಳೆದ 25 ವರುಷಗಳಿಂದ ಇಲ್ಲಿನ ತಾಲೂಕು(Puttur) ಕಛೇರಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ರೆಕಾರ್ಡ್ ರೂಮ್ ನಿರ್ವಹಣೆ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದ ಕರ್ಕುಂಜ ನಿವಾಸಿ, ಹರೀಶ್(ವ.45) ಆ.22 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅನಾರೋಗ್ಯ ಕಾರಣದಿಂದಾಗಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ತೀವ್ರಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಿಸದೆ ಆ.22ರಂದು ನಿಧನರಾದರು.

ಮೃತರು ತಂದೆ ಲೋಕಯ್ಯ ನಾಯ್ಕ, ತಾಯಿ ಸೀತಾ ಲೋಕಯ್ಯ, ಪತ್ನಿ ರಮ್ಯ, ಪುತ್ರ ಶ್ರೇಯಸ್ ಹಾಗೂ ಸಹೋದರ ರಾದ ವಿಜಯ, ದಿನೇಶ್ ಅವರನ್ನು ಅಗಲಿದ್ದಾರೆ.

ಇದನ್ನೂ ಓದಿ: ಸುಳ್ಯ : ಎಲಿಮಲೆಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ತಮಿಳುನಾಡು ಮೂಲದ ದಂಪತಿ

You may also like

Leave a Comment