Home » ಪುತ್ತೂರು : ಚರಣ್ ರಾಜ್ ಕೊಲೆ ಪ್ರಕರಣ : ಕಿಶೋರ್ ಕಲ್ಲಡ್ಕ ತಂಡದ ಕೃತ್ಯ?

ಪುತ್ತೂರು : ಚರಣ್ ರಾಜ್ ಕೊಲೆ ಪ್ರಕರಣ : ಕಿಶೋರ್ ಕಲ್ಲಡ್ಕ ತಂಡದ ಕೃತ್ಯ?

0 comments

ಪುತ್ತೂರಿನ ಹಿಂದೂ ಸಂಘಟನೆ ಕಾರ್ತಿಕ್ ಮೇರ್ಲ ಎಂಬವರ ಹತ್ಯೆ ಆರೋಪಿಯ ಚರಣ್ ರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದು ಕಿಶೋರ್ ಪೂಜಾರಿ ಕಲ್ಲಡ್ಕ ಹಾಗೂ ತಂಡದ ಕೃತ್ಯ ಎಂದು ತಿಳಿದು ಬಂದಿದೆ.

ಚರಣ್ ರಾಜ್ ತಮ್ಮ ಮಾವ ಕಿಟ್ಟಣ್ಣ ರೈ ಅವರ ಹೊಸ ಮೆಡಿಕಲ್ ಶಾಪ್ ನ ಶುಭಾರಂಭದ ಹಿನ್ನೆಲೆಯಲ್ಲಿ ಪೆರ್ಲಂಪಾಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದೆ.

ಈ ಕುರಿತು ಚರಣ್ ರಾಜ್ ಜತೆಗಿದ್ದ ನವೀನ್ ಕುಮಾರ್ ಎಂಬವರು ಕೊಲೆ ಮಾಡಿದ ತಂಡದಲ್ಲಿದ್ದ ಓರ್ವನನ್ನು ಗುರುತು ಮಾಡಿದ್ದು ಅವರು ಕಿಶೋರ್ ಪೂಜಾರಿ ಕಲ್ಲಡ್ಕ ಎಂದು ಹೇಳಲಾಗಿದೆ.

ಈ ಘಟನೆ ಪುತ್ತೂರು ತಾಲೂಕಿನ ಕೊಳ್ತಿಗೆಯ ಪೆರ್ಲಂಪಾಡಿಯಲ್ಲಿ ನಡೆದಿದ್ದು, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment