Home » ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ವೈದ್ಯಾಧಿಕಾರಿಯಾಗಿ ಡಾ.ಮಧುಶ್ರೀ ಕೆ

ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೂತನ ವೈದ್ಯಾಧಿಕಾರಿಯಾಗಿ ಡಾ.ಮಧುಶ್ರೀ ಕೆ

by Praveen Chennavara
0 comments

ಸವಣೂರು : ಪಾಲ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ವೈದ್ಯಾಧಿಕಾರಿಯಾಗಿ ಡಾ.ಮಧುಶ್ರೀ ಕೆ. ಅವರನ್ನು ನಿಯುಕ್ತಿಗೊಳಿಸಲಾಗಿದೆ.

ಇಲ್ಲಿ ಆಡಳಿತ ವೈದ್ಯಾಧಿಕಾರಿಯಾಗಿದ್ದ ಡಾ.ದೀಪಕ್ ರೈ ಅವರು ಕಡಬ, ಪುತ್ತೂರು ತಾಲೂಕು ವೈದ್ಯಾಧಿಕಾರಿಯಾಗಿ ಕರ್ತವ್ಯದಲ್ಲಿರುವುದರಿಂದ ಆ ಸ್ಥಾನ ತೆರವುಗೊಂಡಿತ್ತು.

ಇದೀಗ ಡಾ.ಮಧುಶ್ರೀ ಅವರನ್ನು ನಿಯುಕ್ತಿಗೊಳಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಾ.ಮಧು ಶ್ರೀ

ಡಾ.ಮಧುಶ್ರೀ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಶೇಷ ನೇಮಕಾತಿ ಸಮಿತಿಯ ಅಧಿಸೂಚನೆಯಂತೆ ನೇಮಕಗೊಂಡಿದ್ದಾರೆ.

ಡಾ.ಮಧುಶ್ರೀ ಯವರು ಸುಳ್ಯ ತಾಲೂಕು ಅರಂತೋಡು ಗ್ರಾಮದ ಕುಕ್ಕುಂಬಳ ಡಾ.ಗೌತಮ್ ಎಂ.ಪಿ.ಯವರ ಪತ್ನಿಯಾಗಿದ್ದು ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಎಂ.ಬಿ.ಬಿ.ಎಸ್.ಪದವಿ ಪಡೆದಿದ್ದು ಭಟ್ಕಳದ ಕೊಣಾರ ಮತ್ತು ಪಣಂಬೂರು ಎನ್.ಎಂ.ಪಿ.ಟಿ.ಆಸ್ಪತ್ರೆಗಳಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ಮಹಾರಾಷ್ಟ್ರದ ಕೊಲ್ಹಾಪುರ ಮೆಡಿಕಲ್ ಕಾಲೇಜಿನಿಂದ ಡಿ.ಸಿ.ಹೆಚ್.(ಶಿಶು ಚಿಕಿತ್ಸಾ ತಜ್ಞ) ಪದವಿಯನ್ನು ಪಡೆದಿದ್ದಾರೆ

You may also like

Leave a Comment