Home » ಪುತ್ತೂರು : ಹೃದಯಾಘಾತದಿಂದ ಶಬೀರ್ ಕಟ್ಟತ್ತಾರು ನಿಧನ

ಪುತ್ತೂರು : ಹೃದಯಾಘಾತದಿಂದ ಶಬೀರ್ ಕಟ್ಟತ್ತಾರು ನಿಧನ

by Praveen Chennavara
0 comments

ಪುತ್ತೂರು: ಕೆಯ್ಯೂರು ಗ್ರಾಮದ ಕಟ್ಟತ್ತಾರು ನಿವಾಸಿ ಶಬೀರ್(25.ವ) ಅವರು ಹೃದಯಘಾತದಿಂದ ಸೆ.17ರಂದು ನಿಧನರಾಗಿದ್ದಾರೆ.

ಎದೆ ನೋವು ಕಾಣಿಸಿಕೊಂಡ ಶಬೀರ್ ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸುವ ಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಮಂಗಳೂರು ಏನಪೋಯ ಆಸ್ಪತ್ರೆ ರೋಗಿಗಳನ್ನು ಕರೆದುಕೊಂಡು ಹೋಗಲು ಮತ್ತು ಅವರಿಗೆ ರೀತಿಯ ನೆರವನ್ನು ನೀಡುತ್ತಿದ್ದ ಶಬೀರ್ ಅ.2ರಂದು ಏನಪೋಯ ಆಸ್ಪತ್ರೆ ಸಹಯೋಗದಲ್ಲಿ ಕಟ್ಟಿತ್ತಾರಿನಲ್ಲಿ ನಡೆಯಲಿರುವ ಆರೋಗ್ಯ ಶಿಬಿರ ಕಾರ್ಯಕ್ರಮ ಆಯೋಜನೆಗೆ ಮುತುವರ್ಜಿ ವಹಿಸಿ ಸಿದ್ಧತಾ ಕೆಲಸ ಮಾಡಿಕೊಂಡಿದ್ದರು ಎಂದು ಮೃತರ ದೊಡ್ಡಪ್ಪ ಅಬ್ದುಲ್ ರಹಿಮಾನ್ ಗುತ್ತಿಗಾರು ತಿಳಿಸಿದ್ದಾರೆ. ಸ್ಥಳೀಯವಾಗಿ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ಶಬೀರ್ ಅವರ ನಿಧನದಿಂದ ಕಟ್ಟತ್ತಾರು ಪರಿಸರದಲ್ಲಿ ಸ್ಮಶಾನ ಮೌನ ಆವರಿಸಿದೆ.

ಮೃತರು ತಂದೆ ಇಸ್ಮಾಯಿಲ್ ಗುತ್ತಿಗಾರು, ತಾಯಿ ಮರಿಯಮ್ಮ, ಸಹೋದರ ಶಾಕಿರ್, ಸಹೋದರಿಯರಾದ ಶಬೀನ ಹಾಗೂ ಸಮೀರಾ ಅವರನ್ನು ಅಗಲಿದ್ದಾರೆ.

You may also like

Leave a Comment