Home » ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಶನೈಶ್ಚರ ಪೂಜೆಗೆ ಅನುಮತಿ ನೀಡಲು ಹೈಕೋರ್ಟ್ ಆದೇಶ | ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡರಿಗೆ ಹಿನ್ನಡೆ

ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಶನೈಶ್ಚರ ಪೂಜೆಗೆ ಅನುಮತಿ ನೀಡಲು ಹೈಕೋರ್ಟ್ ಆದೇಶ | ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡರಿಗೆ ಹಿನ್ನಡೆ

by Praveen Chennavara
0 comments

ಪುತ್ತೂರು: ಮುಂಡೂರು ಗ್ರಾಮದ ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಇದರ ವತಿಯಿಂದ ಸೆ.10ರಂದು ಶನೈಶ್ಚರ ಪೂಜೆ ನಡೆಸಲು ಸಕಲ ಸಿದ್ದತೆ ನಡೆದಿದೆ.

ಈತನ್ಮದ್ಯೆ ಶನೈಶ್ವರ ಪೂಜೆ ನಡೆಸಲು ದೇವಸ್ಥಾನದಲ್ಲಿ ಅವಕಾಶವಿಲ್ಲ ಹಾಗೂ ಅನುಮತಿ ಇಲ್ಲ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕರೆಮನೆ ಲೋಕಪ್ಪ ಗೌಡ ಅವರು ಶ್ರೀರಾಮ ಗೆಳೆಯರ ಬಳಗಕ್ಕೆ ಹಾಗೂ ಪೂಜಾ ಸಮಿತಿ ಯವರಿಗೆ ನೋಟಿಸ್ ಹಾಗೂ ಪ್ರಕಟಣೆಯಲ್ಲಿ ತಿಳಿಸಿದ್ದರು.

ಇದನ್ನು ಪ್ರಶ್ನಿಸಿ ಹಾಗೂ ಅನುಮತಿ ನೀಡುವಂತೆ ಕೋರಿ ಶ್ರೀರಾಮ ಗೆಳೆಯರ ಬಳಗ ಪುತ್ತಿಲ ,ಶನೈಶ್ಚರ ಪೂಜಾ ಸಮಿತಿ ಅಧ್ಯಕ್ಷ ಅನಿಲ್ ಕಣ್ಣರ್ನೂಜಿ ಹಾಗೂ ಬಾಲಚಂದ್ರ ಗೌಡ ಕಡ್ಯ ಅವರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು,ಇದೀಗ ಹೈಕೋರ್ಟ್ ಪೂಜೆ ನಡೆಸಲು ಅವಕಾಶ ನೀಡುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ, ಸಹಾಯಕ‌ ಕಮೀಷನರ್ ,ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕರೆಮನೆ ಲೋಕಪ್ಪ ಗೌಡ ಅವರಿಗೆ ಸೂಚನೆ ನೀಡಿದೆ.ಅರ್ಜಿದಾರರ ಪರವಾಗಿ ನ್ಯಾಯವಾದಿ ರಾಜಶೇಖರ್ ವಾದಿಸಿದರು.

ಈ ಮೂಲಕ ಶನೈಶ್ಚರ ಪೂಜೆ ನಡೆಯುವುದನ್ನು ತಡೆಯುವ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಹಾಗೂ ಇತರರಿಗೆ ಹಿನ್ನಡೆಯಾಗಿದೆ.

You may also like

Leave a Comment