Home » ಪುತ್ತೂರು: ಡಾ| ಶ್ರೀಧರ ಭಂಡಾರಿ ಅವರ ಸಂಸ್ಮರಣೆ ಹಾಗೂ “ಡಾ| ಶ್ರೀಧರ ಭಂಡಾರಿ ಯಕ್ಷದೇಗುಲ ಪ್ರಶಸ್ತಿ’ ಪ್ರದಾನ ಸಮಾರಂಭ

ಪುತ್ತೂರು: ಡಾ| ಶ್ರೀಧರ ಭಂಡಾರಿ ಅವರ ಸಂಸ್ಮರಣೆ ಹಾಗೂ “ಡಾ| ಶ್ರೀಧರ ಭಂಡಾರಿ ಯಕ್ಷದೇಗುಲ ಪ್ರಶಸ್ತಿ’ ಪ್ರದಾನ ಸಮಾರಂಭ

by Praveen Chennavara
0 comments

Dr. Shridhara Bhandari: ಪುತ್ತೂರು: ಯಕ್ಷಗಾನದ ಸಿಡಿಲಮರಿ, ಶತ ಧಿಗಿಣಗಳ ಸರದಾರ ಖ್ಯಾತಿಯ ಪುತ್ತೂರು ಡಾ| ಶ್ರೀಧರ ಭಂಡಾರಿ ಅವರ ಸಂಸ್ಮರಣೆ ಹಾಗೂ “ಡಾ| ಶ್ರೀಧರ ಭಂಡಾರಿ ಯಕ್ಷದೇಗುಲ ಪ್ರಶಸ್ತಿ’ ಪ್ರದಾನ ಸಮಾರಂಭವು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಯಕ್ಷಗಾನ ರಂಗದಲ್ಲಿ ತನ್ನದೇ ಆದ ಶೈಲಿಯನ್ನು ತೋರಿಸಿಕೊಟ್ಟು ಕಲೆಯನ್ನು ಇನ್ನೊಂದು ಪೀಳಿಗೆಗೆ ವರ್ಗಾಯಿಸಿ ಅವರಲ್ಲಿ ಅಭಿರುಚಿ ಮೂಡಿಸಿದ ಮಹಾನ್‌ ಕಲಾವಿದ ಡಾ| ಶ್ರೀಧರ ಭಂಡಾರಿ (Dr. Shridhara Bhandari) ಎಂದು ಸ್ಮರಿಸಿದರು.

ವ್ಯಕ್ತಿಯ ಕಾಲಾನಂತರ ವರ್ಷ ದಿಂದ ವರ್ಷಕ್ಕೆ ನೆನಪು ಮಾಸುತ್ತದೆ. ಆದರೆ ಶ್ರೀಧರ ಭಂಡಾರಿ ಅವರ ನೆನಪು ವರ್ಷದಿಂದ ವರ್ಷಕ್ಕೆ ಹೆಚುತ್ತಿರುವುದು ಅವರು ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಸೇವೆಯ ಫಲ ಎಂದರು.

ಶಾಸಕ ಸಂಜೀವ ಮಠಂದೂರು ಮತ್ತು ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ಮಾತನಾಡಿ, ಕಲಾವಿದನ ಬದುಕು ಸಮೃದ್ಧ ಬದುಕು ಎಂಬು ದನ್ನು ತೋರಿಸಿಕೊಟ್ಟಿರುವ ಶ್ರೀಧರ ಭಂಡಾರಿ ಅವರು ಹಳ್ಳಿಯ ಮೂಲೆ ಯಿಂದ ವಿಶ್ವಕ್ಕೆ ಯಕ್ಷಗಾನದ ಸೊಬ ಗನ್ನು ಪಸರಿಸಿದವರು ಎಂದರು.

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಡಾ| ಟಿ. ಶ್ಯಾಮ ಭಟ್‌ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್‌ ಮುಳಿಯ, ಜಕ್ಕೂರು ಯಕ್ಷ ಸಿಂಚನ ಕಲಾವೃಂದದ ಸಂಸ್ಥಾಪಕ ಚೇವಾರು ಚಿದಾನಂದ ಕಾಮತ್‌, ನ್ಯಾಯವಾದಿ ಮಹೇಶ್‌ ಕಜೆ, ಉಷಾ ಶ್ರೀಧರ ಭಂಡಾರಿ, ಉದ್ಯಮಿ ಸಚ್ಚಿದಾನಂದ ಶೆಟ್ಟಿ, ಶ್ರೀದೇವಿ ಪ್ರಕಾಶ್‌ ಭಂಡಾರಿ, ಕೋಕಿಲ ಜಯವರ್ಧನ, ಶಾಂತಲಾ ಸಚ್ಚಿದಾನಂದ ಶೆಟ್ಟಿ ಮೊದಲಾದವರಿದ್ದರು.

ಅನಿಲಾ ದೀಪಕ್‌ ಶೆಟ್ಟಿ ಪ್ರಸ್ತಾ ವನೆಗೈದರು. ಅರ್ಪಿತಾ ಪ್ರಶಾಂತ್‌ ಶೆಟ್ಟಿ ಕಟಪಾಡಿ ನಿರೂಪಿಸಿ ವಂದಿ ಸಿದರು. ಹನುಮಗಿರಿಯ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರಿಂದ “ಶ್ರೀದೇವಿ ಮಹಾತ್ಮೆ’ ಪ್ರದರ್ಶಿಸಲ್ಪಟ್ಟಿತು.

ಕುರಿಯ ಅವರಿಗೆ ಪ್ರಶಸ್ತಿ
ಹಿರಿಯ ಭಾಗವತ ಕುರಿಯ ಗಣಪತಿ ಶಾಸ್ತ್ರೀ ಅವರಿಗೆ ಡಾ| ಶ್ರೀಧರ ಭಂಡಾರಿ ಯಕ್ಷ ದೇಗುಲ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದು ಎಲ್ಲ ಯಕ್ಷಗಾನ ಕಲಾವಿದರಿಗೆ ಸಂದ ಗೌರವ ಎಂದು ಗಣಪತಿ ಶಾಸ್ತ್ರೀ ಕೃತಜ್ಞತೆ ಸಲ್ಲಿಸಿದರು.

ಯಕ್ಷರಕ್ಷ ನಿಧಿ ಸಮರ್ಪಣೆ
ವೇಣೂರು ಆಶಾ ವಾಮನ ಕುಮಾರ್‌ ಅವರಿಗೆ ಯಕ್ಷರಕ್ಷ ನಿಧಿಯನ್ನು ಸಮರ್ಪಿಸಲಾಯಿತು.

You may also like

Leave a Comment