Home » ಮಂಗಳೂರು: ಗುಟ್ಕಾ ಜಗಿದ ಚಾಲಕರಿಗೆ 5,000/- ದಂಡ ಜಡಿದ ಆರ್ ಟಿಒ ಅಧಿಕಾರಿಗಳು!

ಮಂಗಳೂರು: ಗುಟ್ಕಾ ಜಗಿದ ಚಾಲಕರಿಗೆ 5,000/- ದಂಡ ಜಡಿದ ಆರ್ ಟಿಒ ಅಧಿಕಾರಿಗಳು!

0 comments

ಮಂಗಳೂರು: ಗುಟ್ಕಾ ಜಗಿಯುತ್ತ ಬಸ್ ಚಾಲನೆ ಮಾಡಿದ ಬಸ್ ಚಾಲಕರಿಗೆ ಮಂಗಳೂರು ಆರ್‌ಟಿಒ ಅಧಿಕಾರಿಗಳು ದಂಡ ವಿಧಿಸಿ ಶಾಕ್ ಕೊಟ್ಟಿದ್ದಾರೆ.

ಈ ಘಟನೆ ರಾತ್ರಿ ಬಿಜೈ ಬಳಿ ನಡೆದಿದೆ. ರಾತ್ರಿ ದಾಖಲೆ ತಪಾಸಣೆ ಸಂದರ್ಭ 2 ಬಸ್‌ಗಳ ಚಾಲಕರು ಗುಟ್ಕಾ ಜಗಿಯುತ್ತ ಅಧಿಕಾರಿಗಳ ಮುಂದೆ ಬಂದರು. ಇದನ್ನು ಗಮನಿಸಿದ ಆರ್‌ಟಿಒ ಅಧಿಕಾರಿಗಳು ಇಬ್ಬರೂ ಚಾಲಕರಿಗೂ ತಲಾ 5,000 ರೂ. ದಂಡ ವಿಧಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಟಿಒ ಆರ್.ಎಂ. ವರ್ಣೇಕರ್, “ಮದ್ಯ ಸೇವಿಸಿ ವಾಹನ ಚಲಾಯಿಸುವವರ ವಿರುದ್ಧ ಮಾತ್ರವಲ್ಲದೆ ಯಾವುದೇ ರೀತಿಯ ಅಮಲು ಪದಾರ್ಥಗಳನ್ನು ಸೇವಿಸಿ ಚಲಾಯಿಸುವವರ ವಿರುದ್ಧ ಕೂಡ ಪ್ರಕರಣ ದಾಖಲಿಸಿ, ದಂಡ ವಿಧಿಸಲು ಅವಕಾಶವಿದೆ. ಅದರಂತೆ ದಂಡ ವಿಧಿಸಲಾಗಿದೆ’ ಎಂದು ತಿಳಿಸಿದ್ದಾರೆ.

You may also like

Leave a Comment