Home » ಪ್ರವೀಣ್ ನೆಟ್ಟಾರು ಮನೆಗೆ ಬಾರ್ಕೂರು ಸಂಸ್ಥಾನದ ಸಂತೋಷ್ ಗುರೂಜಿ ಭೇಟಿ

ಪ್ರವೀಣ್ ನೆಟ್ಟಾರು ಮನೆಗೆ ಬಾರ್ಕೂರು ಸಂಸ್ಥಾನದ ಸಂತೋಷ್ ಗುರೂಜಿ ಭೇಟಿ

by Praveen Chennavara
0 comments

ಸುಳ್ಯ : ದುಷ್ಕರ್ಮಿಗಳ ದಾಳಿಗೆ ಬಲಿಯಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಮನೆಗೆ ಬಾರ್ಕೂರು ಸಂಸ್ಥಾನದ ಸಂತೋಷ್ ಗುರೂಜಿ ಇಂದು ಭೇಟಿ ನೀಡಿ ಕುಟುಂಬಸ್ಥರನ್ನು ಸಂತೈಸಿದ್ದಾರೆ.

ಮನೆ ಮಂದಿಯನ್ನು ಭೇಟಿಯಾದ ಸಂದರ್ಭದಲ್ಲಿ ಪ್ರವೀಣ್ ನೆಟ್ಟಾರು ಅವರ ತಂದೆ ದುಃಖಿತರಾಗಿ ಮಾತನಾಡುವಾಗ, ಗುರೂಜಿ ಅವರು, ನಾನು ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ. ಹಿಂದುತ್ವಕ್ಕಾಗಿ. ನನಗೇ ಏಳು ಎಂಟು ಕಡೆಯಿಂದ ಬೆದರಿಕೆಗಳು ಬಂದಿದೆ. ಆದರೂ ನಾವು ಹೆದರಬಾರದು. ಇದೊಂದು ಧರ್ಮ ಸಂಗ್ರಾಮ. ಇಡೀ ರಾಜ್ಯದಲ್ಲಿ ಈ ಧರ್ಮ ರಕ್ಷಿಸೋಕೆ ಸೈನಿಕರಿದ್ದಾರೆ. ನಿಮ್ಮ ಮಗ ಸೈನಿಕ. ಆತ ಸತ್ತ ಎಂದು ಹೇಳಬಾರದು. ಆತ ಧರ್ಮಕ್ಕಾಗಿ ಹುತಾತ್ಮನಾಗಿದ್ದಾನೆ ಎಂದು ಹೇಳಬೇಕು ಎಂದು ಹೇಳುತ್ತಾ ಸಮಾಧಾನದ ಮಾತುಗಳನ್ನು ಮನೆ ಮಂದಿಗೆ ಹೇಳಿದ್ದಾರೆ.

You may also like

Leave a Comment