Home » “ಪೋಡ ಪುಲ್ಲೆ, ಪೊಲೀಸ್- ನಾಯಿಂಡೆ ಮೋನೆ ಪೊಲೀಸ್ !!”| SDPI ಸಮಾವೇಶದಲ್ಲಿ ಜಿಲ್ಲಾ ಪೊಲೀಸರನ್ನು ಅವಾಚ್ಯವಾಗಿ ನಿಂದಿಸುತ್ತಾ ಯುವಕರ ಹುಚ್ಚಾಟ ?!

“ಪೋಡ ಪುಲ್ಲೆ, ಪೊಲೀಸ್- ನಾಯಿಂಡೆ ಮೋನೆ ಪೊಲೀಸ್ !!”| SDPI ಸಮಾವೇಶದಲ್ಲಿ ಜಿಲ್ಲಾ ಪೊಲೀಸರನ್ನು ಅವಾಚ್ಯವಾಗಿ ನಿಂದಿಸುತ್ತಾ ಯುವಕರ ಹುಚ್ಚಾಟ ?!

0 comments

ಮಂಗಳೂರು: ನಿನ್ನೆ ಮಂಗಳೂರಿನ ಅಡ್ಯಾರ್ ಕಣ್ಣೂರು ಮೈದಾನದಲ್ಲಿ ಎಸ್.ಡಿ.ಪಿ.ಐ ವತಿಯಿಂದ ನಡೆದ ಬೃಹತ್ ಜನಾಧಿಕಾರ ಸಮಾವೇಶದಲ್ಲಿ ಭಾಗವಹಿಸಿದ್ದ ರಾಜ್ಯಮಟ್ಟದ ನಾಯಕರೆಲ್ಲ ಎರ್ರಾಬಿರ್ರಿ ನಾಲಗೆ ಹರಿಯಬಿಟ್ಟ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಲ್ಲಿ ಹರಿದಾಡಿದ ಬೆನ್ನಲ್ಲೇ ಪೊಲೀಸ್ ನಿಂದನೆಯ ಇನ್ನೊಂದು ವಿಡಿಯೋ ವೈರಲ್ ಆಗಿದೆ.

ಸಮಾವೇಶಕ್ಕೂ ಮುನ್ನ ನಡೆದಿದೆ ಎನ್ನಲಾಗಿರುವ, ಒಂದೆರಡು ಬೈಕ್ ಗಳಲ್ಲಿ ಎಸ್.ಡಿ.ಪಿ.ಐ ಬಾವುಟ ಹಿಡಿದ ಮುಸ್ಲಿಂ ಯುವಕರು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರನ್ನು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ ವೀಡಿಯೊ ವೈರಲ್ ಆಗುತ್ತಿದೆ.
ಹಾಗೂ ರಾಷ್ಟೀಯ ಸ್ವಯಂ ಸೇವಕ ಸಂಘವನ್ನು ಅವಾಚ್ಯವಾಗಿ ನಿಂದಿಸುತ್ತಾ ಪ್ರಯಾಣಿಸುತ್ತಿರುವ ವಿಡಿಯೋ ವೈರಲ್ ಆಗುವುದರೊಂದಿಗೆ ಆಕ್ರೋಶವೂ ವ್ಯಕ್ತವಾಗಿದೆ.

ಮೊದಲಿಗೆ ಆರ್.ಎಸ್.ಎಸ್ ನ ಬಗ್ಗೆ ಅವಾಚ್ಯ ಶಬ್ದ ಬಳಸಿ ಘೋಷಣೆ ಕೂಗಲಾಗಿದೆ. ನಂತರ, ‘ ಪೋಡ ಪುಲ್ಲೆ ಪೊಲೀಸ್, ನಾಯಿಂಡೆ ಮೋನೆ ಪೊಲೀಸ್ ‘ ಎಂದೆಲ್ಲ ಅವಾಚ್ಯವಾಗಿ ಹೀಯಾಳಿಸಿ ನಿಂದಿಸುತ್ತಿರುವುದು ಕಂಡುಬಂದಿದೆ. ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವಕರ ನಡೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಯಿತಲ್ಲದೇ, ಕೂಡಲೇ ಜಿಲ್ಲಾ ಪೊಲೀಸ್ ತಮ್ಮ ಕಾನೂನಿನ ರುಚಿ ತೋರಿಸಬೇಕೆನ್ನುವ ಆಗ್ರಹ ವ್ಯಕ್ತವಾಗಿದೆ.

You may also like

Leave a Comment