Home » Belthangady: ಸೋಮಾವತಿ ನದಿಯಲ್ಲಿ ಮೀನುಗಳ ಮಾರಣಹೋಮ!

Belthangady: ಸೋಮಾವತಿ ನದಿಯಲ್ಲಿ ಮೀನುಗಳ ಮಾರಣಹೋಮ!

1 comment
Belthangady

Belthangady: ದಕ್ಷಿಣ ಕನ್ನಡದ( Dakshina Kannada)ಬೆಳ್ತಂಗಡಿ (Belthangady) ನಗರಕ್ಕೆ ಕುಡಿಯುವ ನೀರಿಗೆ ಸೋಮಾವತಿ ನದಿಯಲ್ಲಿ ಪ್ರಮುಖ ಆಶ್ರಯವಾಗಿದ್ದ ಸಾವಿರಾರು ಮೀನು ಸಾಯುತ್ತಿವೆ. ನಗರಕ್ಕೆ ನೀರು ಸರಬರಾಜು ಮಾಡುವ ನದಿಯಲ್ಲಿದ್ದ ಪ್ರಮುಖ ಘಟಕ ವಾಗಿರುವ ಸೋಮಾವತಿ ನೀರಿಗೆ ಕಿಡಿಕೇಡಿಗಳು ವಿಷ ಪದಾರ್ಥ ಹಾಕಿರುವುದರಿಂದ ಮೀನುಗಳು(Fish) ಸತ್ತಿರುವ ಅನುಮಾನ ಭುಗಿಲೆದ್ದಿದೆ.

ಈಗಾಗಲೇ ಜನರು ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿದ್ದಾರೆ. ಒಂದೆಡೆ ಮಳೆಯಿಲ್ಲದೆ ಮಾಡಿ ನೀರೆಲ್ಲ ಬತ್ತಿ ಹೋಗುತ್ತಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಸ್ಥಿತಿ ಈಗಾಗಲೇ ನಿರ್ಮಾಣವಾಗಿದೆ. ಈ ಪರಿಸ್ಥಿತಿಯಲ್ಲಿ ಬೆಳ್ತಂಗಡಿ ನಗರಕ್ಕೆ ಕುಡಿಯುವ ನೀರು ಪೂರೈಕೆಗೆ ಆಧಾರವಾಗಿರುವ ನದಿ ನೀರಿನ ಘಟಕಕ್ಕೆ ಕಿಡಿಕೇಡಿಗಳು ವಿಷ ಮಿಶ್ರಣ ಮಾಡಿದ್ದು ,ಇದರಿಂದ ಮೀನುಗಳ ಮಾರಣಹೋಮವಾಗಿದ್ದು ಹೀಗಾಗಿ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಪ್ರಸ್ತುತ ನಗರವಾಸಿಗಳಿಗೆ ಪ್ರತಿ ದಿನ 10 ಲಕ್ಷ ಲೀಟರ್ ನೀರಿನ ಅಗತ್ಯತೆ ಇದ್ದು, ಈ ನೀರನ್ನೇ ಅವಲಂಬಿಸಬೇಕಾಗಿದೆ. ಆದರೆ ವಿಷ ಪ್ರಾಶನವಾಗಿರುವ ಹಿನ್ನೆಲೆ ನೀರು ಸರಬರಾಜು ಪ್ರಕ್ರಿಯೆ ನಿಲ್ಲಿಸಲಾಗಿದೆ. ಟ್ಯಾಂಕ್ ನೀರನ್ನು ಸಂಪೂರ್ಣ ಖಾಲಿ ಮಾಡಿಸಿ ಸ್ವಚ್ಛಗೊಳಿಸಿದ ನಂತರ ಬೋರ್ ವೆಲ್ ಮೂಲಕ ನೀರು ಸರಬರಾಜು ಮಾಡಲಾಗುವ ಕುರಿತು ನಗರ ಪಂಚಾಯಿತಿ ಉಪಾಧ್ಯಕ್ಷ ಜಯಾನಂದ ಗೌಡರವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: UPSC Recruitment 2023: ಪದವಿ ಪಾಸಾದವರಿಗೆ ಭರ್ಜರಿ ಉದ್ಯೋಗವಕಾಶ! 322 ಹುದ್ದೆಗಳಿಗೆ ಅರ್ಜಿ ಆಹ್ವಾನ! ಮಾಸಿಕ ವೇತನ ರೂ.1 ಲಕ್ಷಕ್ಕಿಂತಲೂ ಹೆಚ್ಚು!!!

You may also like

Leave a Comment