Home » ಅಪ್ರಾಪ್ತ ಹಿಂದೂ ಬಾಲಕಿಯನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಅಸಭ್ಯ ವರ್ತನೆ!! ಅನ್ಯಕೋಮಿನ ಯುವಕ ಪೊಲೀಸರ ವಶಕ್ಕೆ

ಅಪ್ರಾಪ್ತ ಹಿಂದೂ ಬಾಲಕಿಯನ್ನು ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಅಸಭ್ಯ ವರ್ತನೆ!! ಅನ್ಯಕೋಮಿನ ಯುವಕ ಪೊಲೀಸರ ವಶಕ್ಕೆ

0 comments

ಪುತ್ತೂರು:ಇಲ್ಲಿನ ಬಸ್ಸು ನಿಲ್ದಾಣದ ಶೌಚಾಲಯಯಕ್ಕೆ ಅನ್ಯಕೋಮಿನ ವ್ಯಕ್ತಿಯೊಬ್ಬ ಗದಗ ಮೂಲದ ಅಪ್ರಾಪ್ತ ಹಿಂದೂ ಬಾಲಕಿಯನ್ನು ಕರೆದುಕೊಂಡು ಹೋಗಿ ಅಸಭ್ಯವಾಗಿ ವರ್ತಿಸಿದ ಘಟನೆಯೊಂದು ಬೆಳಕಿಗೆ ಬಂದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಸ್ಸು ನಿಲ್ದಾಣದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿರುವ ಗದಗ ಮೂಲದ ಮಹಿಳೆಯ 10 ವರ್ಷದ ಮಗಳನ್ನು ಆರೋಪಿ ನೌಫಾಲ್ ಸರಳಿಕಟ್ಟೆ ಎಂಬಾತ ಹಣದ ಆಮಿಷವೊಡ್ಡಿ ಶೌಚಾಲಯಕ್ಕೆ ಕರೆದುಕೊಂಡು ಹೋಗಿದ್ದ.ವಿಚಾರ ಗಮನಕ್ಕೆ ಬಂದ ಕೂಡಲೇ ಮಹಿಳೆ ಆರೋಪಿ ನೌಫಲ್ ನನ್ನು ವಿಚಾರಿಸಿದ್ದು, ಆತ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಬಾಲಕಿಯ ತಾಯಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಹಿಂದೂ ಸಂಘಟನೆಗಳ ನಾಯಕರು ಕೂಡಾ ಸ್ಥಳಕ್ಕೆ ಧಾವಿಸಿದ್ದಾರೆ.ಪುತ್ತೂರು ನಗರ ಠಾಣೆಯ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದಾರೆ.

You may also like

Leave a Comment