Home » ಪುತ್ತೂರು : ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ವಶಕ್ಕೆ

ಪುತ್ತೂರು : ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ವಶಕ್ಕೆ

by Praveen Chennavara
0 comments

ಪುತ್ತೂರು : ಹಾಸ್ಟೇಲ್ ನಿಂದ ಕಾಲೇಜಿಗೆ ಹೋಗುತ್ತಿದ್ದ ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ ಸುಳ್ಯ ಐವರ್ನಾಡಿನ ಯುವಕನನ್ನು ಪುತ್ತೂರು ಮಹಿಳಾ ಠಾಣಾ ಪೊಲೀಸರು ಪೋಕ್ಟೋ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.

ಸುಳ್ಯ ಐವರ್ನಾಡು ನಿವಾಸಿ ರಕ್ಷಿತ್ ಪೋಕ್ಸ್ ಪ್ರಕರಣದಲ್ಲಿ ಬಂಧಿತನಾದ ಆರೋಪಿ.

ಸುಳ್ಯ ಮೂಲದ 16 ವರ್ಷದ ಅಪ್ರಾಪ್ತ ಬಾಲಕಿ ಪುತ್ತೂರು ಹಾಸ್ಟೇಲ್ ನಿಂದ ಕಾಲೇಜಿನಲ್ಲಿ ಪಿಯುಸಿ ವಿದ್ಯಾಬ್ಯಾಸ ಮಾಡುತ್ತಿದ್ದಳು. ಈ ನಡುವೆ ರಕ್ಷಿತ್ ಪ್ರೀತಿಸುತಿರುವ ಕುರಿತು ಮಾಹಿತಿ ಪಡೆದು ಬಾಲಕಿಯ ಮನೆಯವರು ಆತನಿಗೆ ಬುದ್ದಿವಾದ ಹೇಳಿದ್ದರು. ಅಲ್ಲದೆ ಬಾಲಕಿಯ ತಂದೆ ರಕ್ಷಿತ್ ನ ವಿರುದ್ಧ ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿರುತ್ತದೆ.

You may also like

Leave a Comment