Home » ನಿರಂತರ ಮಳೆ : ಶಬರಿಮಲೆ ಯಾತ್ರಿಕರಿಗೆ ನಿರ್ಬಂಧ

ನಿರಂತರ ಮಳೆ : ಶಬರಿಮಲೆ ಯಾತ್ರಿಕರಿಗೆ ನಿರ್ಬಂಧ

by Praveen Chennavara
0 comments

ಕಾಸರಗೋಡು : ರಾಜ್ಯದಾದ್ಯಂತ ಬಿರುಸಿನ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆ ಯಾತ್ರಿಕರಿಗೆ ಕಟ್ಟುನಿಟ್ಟಿನ ನಿಯಂತ್ರಣ ಹೇರಲಾಗಿದೆ. ಅತಿಯಾದ ಮಳೆಯಿಂದ 4 ದಿನ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ.

ಮಂಡಲ ಪೂಜೆಗಾಗಿ ನ.15ರಂದು ಶಬರಿಮಲೆ ಗರ್ಭಗುಡಿ ಬಾಗಿಲು ತೆರೆದ ಹಿನ್ನೆಲೆಯಲ್ಲಿ ಈ ನಿಯಂತ್ರಣ ಏರ್ಪಡಿಸಲಾಗಿದೆ.

ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಂಪಾ ನದಿಯಲ್ಲಿ ಹಾಗೂ ಇತರ ಸ್ನಾನಘಟ್ಟಗಳಲ್ಲಿ ಭಕ್ತಾದಿಗಳು ಸ್ನಾನ ಮಾಡದಂತೆ ನಿಯಂತ್ರಣ ಹೇರಲಾಗಿದೆ. ಜನದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ವರ್ಚುವಲ್ ಕ್ಯೂ ಮೂಲಕ ಬುಕ್ಕಿಂಗ್ ನಡೆಸಿದವರಿಗೆ ದಿನ ಬದಲಾಯಿಸಿ ನೀಡುವ ಬಗ್ಗೆಯೂ ದೇವಸ್ವಂ ಬೋರ್ಡ್ ಚಿಂತನೆ ನಡೆಸುತ್ತಿದೆ. ಎರ್ನಾಕುಳಂ, ಇಡುಕ್ಕಿ, ತೃಸೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಈ ಮೂರು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

You may also like

Leave a Comment