Home » ಶಿರಾಡಿಘಾಟ್ ಭೂಕುಸಿತ ; ಪರ್ಯಾಯ ಮಾರ್ಗದ ಮೂಲಕ ವಾಹನ ಸಂಚಾರಕ್ಕೆ ಅವಕಾಶ

ಶಿರಾಡಿಘಾಟ್ ಭೂಕುಸಿತ ; ಪರ್ಯಾಯ ಮಾರ್ಗದ ಮೂಲಕ ವಾಹನ ಸಂಚಾರಕ್ಕೆ ಅವಕಾಶ

0 comments

ಹಾಸನ: ಶಿರಾಡಿಘಾಟ್ ನಲ್ಲಿ ಭೂಕುಸಿತ ಉಂಟಾದ ಹಿನ್ನೆಲೆ ಬೆಂಗಳೂರಿನಿಂದ ಮಂಗಳೂರಿಗೆ ಹೋಗುವ ವಾಹನಗಳು ಏಕಮುಖವಾಗಿ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

ಲಘು ವಾಹನಗಳಿಗೆ ಶಿರಾಡಿಘಾಟ್ ನಲ್ಲೇ ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ. ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಶಿರಾಡಿಘಾಟ್ ನಲ್ಲೇ ಪರ್ಯಾಯ ಮಾರ್ಗದ ಮೂಲಕ ವಾಹನ ಸಂಚಾರಕ್ಕೆ ಅವಕಾಶ ಒದಗಿಸಲಾಗಿದೆ.

ಹಾಸನ ಡಿಸಿ ಆರ್ ಗಿರೀಶ್ ಶಿರಾಡಿಘಾಟ್ ಬಂದ್ ಮಾರ್ಗಸೂಚಿ ಬದಲಿಸಿ, ಎರಡೂ ಕಡೆಯಿಂದ ಯಾವುದೇ ಸಮಸ್ಯೆ ಆಗದಂತೆ ಏಕ ಮುಖ ಸಂಚಾರಕ್ಕೆ ಅವಕಾಶ ನೀಡಿ ಆದೇಶ ನೀಡಿದ್ದಾರೆ.

ಮಂಗಳೂರಿನಿಂದ ಬೆಂಗಳೂರಿಗೆ ಹೋಗೋ ಕಾರು ಜೀಪು, ಟೆಂಪೊ, ಮಿನಿ ವ್ಯಾನ್ ಗಳಿಗೆ ಮಾರನಹಳ್ಳಿಯಿಂದ ಕಾಡುಮನೆ, ಕಾರ್ಲೆ ಕೂಡಿಗೆ, ಆನೆಮಹಲ್ ಸಕಲೇಶಪುರ ಮಾರ್ಗದ ಮೂಲಕ ಬೆಂಗಳೂರಿಗೆ ಹೋಗಲು ಅವಕಾಶ ಕಲ್ಪಿಸಲಾಗಿದೆ. ಸಕಲೇಶಪುರ, ಆನೆಮಹಲ್, ಕ್ಯಾನಹಳಹಳ್ಳಿ, ಚಿನ್ನಹಳ್ಳಿ,ಕಡಗರಹಳ್ಳಿ ಮಾರ್ಗದಲ್ಲಿ ಮಾರನಹಳ್ಳಿ ತಲುಪಿ ಮಂಗಳೂರಿಗೆ ಹೋಗಲು ಅವಕಾಶ ನೀಡಲಾಗಿದೆ.

You may also like

Leave a Comment