Home » ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ದ್ವಿತೀಯ ಸ್ಥಾನ ಪಡೆದ ಎಸ್ ಡಿ ಎಂ ಕಾಲೇಜಿನ ಜಶ್ಮಿತಾ

ರಾಜ್ಯಮಟ್ಟದ ವೇಟ್ ಲಿಫ್ಟಿಂಗ್ ದ್ವಿತೀಯ ಸ್ಥಾನ ಪಡೆದ ಎಸ್ ಡಿ ಎಂ ಕಾಲೇಜಿನ ಜಶ್ಮಿತಾ

0 comments

ಅಕ್ಟೋಬರ್ 31 ಮತ್ತು ನವೆಂಬರ್ 01 ರಂದು ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಎಸ್.ಡಿ.ಎಂ ಉಜಿರೆ ಕಾಲೇಜಿನ ವಿದ್ಯಾರ್ಥಿನಿ ಜಶ್ಮಿತಾ ದಂಬೆಕೋಡಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಇವರು ಗುತ್ತಿಗಾರು ಗ್ರಾಮದ ದಂಬೆಕೋಡಿ ರಾಘವ ಮತ್ತು ಯಶೋಧ ದಂಪತಿಗಳ ಪುತ್ರಿಯಾಗಿದ್ದು, ತನ್ನ ಪಿಯುಸಿ ಶಿಕ್ಷಣವನ್ನು ಎಸ್.ಎಸ್.ಪಿ.ಯು ಕಾಲೇಜು ಸುಬ್ರಮಣ್ಯದಲ್ಲಿ ಪಡೆದು, ಆ ಬಳಿಕ ಕ್ರೀಡೆಯಲ್ಲಿ ಸಾಧನೆ ಮಾಡಿ ಉಜಿರೆ ಎಸ್. ಡಿ. ಯಂ. ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಾರೆ. ಸಂಸ್ಥೆಯ ತರಬೇತುದಾರರಾದ ಸಂತೋಷ್ ಕುಮಾರ್ ರವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.ಹಳ್ಳಿ ಹುಡುಗಿಯ ಸಾಧನೆಗೆ ತಾಲೂಕಿನಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

You may also like

Leave a Comment