1
ಹಾಸನ ಮೂಲದ ವೃದ್ಧರೊಬ್ಬರು ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿಗೆ ಹಾರಲು ಪ್ರಯತ್ನಿಸಿದ ಘಟನೆ ನಡೆದಿದೆ.
ವೃದ್ಧ ಕುಮಾರಧಾರ ನದಿಯ ಸೇತುವೆ ಮೇಲಿಂದ ಕೆಳಗೆ ಹಾರಲು ಯತ್ನಿಸುತ್ತಿದ್ದನ್ನು ಕಂಡ ಸ್ಥಳೀಯ ಬಜರಂಗಳದ ಕಾರ್ಯಕರ್ತ ಸುನಿಲ್ ಸುಬ್ರಹ್ಮಣ್ಯ ಎಂಬವರು ವೃದ್ಧರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಕ್ಷಿಸಿದ ಬಳಿಕ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ವೃದ್ಧನನ್ನು ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ.
