Home » ಸುಳ್ಯ : ರಿಕ್ಷಾ ಬಾಡಿಗೆ ಮಾಡಿ ಚಾಲಕನಿಗೆ ಹಲ್ಲೆಗೈದು ರಿಕ್ಷಾ ದರೋಡೆ ,ಕೇರಳ ಪೊಲೀಸರಿಂದ ಆರೋಪಿಯ ಸೆರೆ

ಸುಳ್ಯ : ರಿಕ್ಷಾ ಬಾಡಿಗೆ ಮಾಡಿ ಚಾಲಕನಿಗೆ ಹಲ್ಲೆಗೈದು ರಿಕ್ಷಾ ದರೋಡೆ ,ಕೇರಳ ಪೊಲೀಸರಿಂದ ಆರೋಪಿಯ ಸೆರೆ

by Praveen Chennavara
0 comments

ಸುಳ್ಯ: ಬಾಡಿಗೆ ನೆಪದಲ್ಲಿ ರಿಕ್ಷಾ ಚಾಲಕನನ್ನು ಕರೆದೊಯ್ದು ಹಲ್ಲೆ ನಡೆಸಿ ಆತನಿಂದ ರಿಕ್ಷಾ ದರೋಡೆಗೈದ ಘಟನೆ ಸುಳ್ಯ ತಾಲೂಕಿನಲ್ಲಿ ನಡೆದಿದೆ.

ದರೋಡೆಗೈದು ರಿಕ್ಷಾ ಕೊಂಡೊಯ್ಯುತ್ತಿದ್ದಾಗ ಆರೋಪಿಗಳು ಕೇರಳ ಪೊಲೀಸರಿಗೆ ಸೆರೆ ಸಿಕ್ಕಿದ್ದರು.

ಅಜ್ಜಾವರದಿಂದ ಆಟೋರಿಕ್ಷಾವನ್ನು ಮಂಡೆಕೋಲಿಗೆ ಬಾಡಿಗೆಗೆಂದು ಇಬ್ಬರು ಕರೆದೊಯ್ದಿದ್ದರು. ಆಟೋ ಅಡ್ಪಂಗಾಯ ತಲುಪುತ್ತಿದ್ದಂತೆ ಆಟೋದಲ್ಲಿದ್ದ ವ್ಯಕ್ತಿ ಏಕಾಏಕಿ ಆಟೋ ಚಾಲಕ ಹುಸೈನ್ ಮೇಲೆ ಹಲ್ಲೆ ನಡೆಸಿದ್ದಾನೆ.

ನಂತರ ಆಟೋ ಚಾಲಕನ ಬಳಿಯಲ್ಲಿದ್ದ ಮೊಬೈಲ್ ಮತ್ತು ಹಣವನ್ನು ಕಿತ್ತು ಆಟೋ ಸಮೇತ ಕೇರಳದ ಕಡೆಗೆ ಪರಾರಿಯಾಗಿದ್ದಾನೆ.

ಘಟನೆ ತಿಳಿದ ಸ್ಥಳೀಯರು ಆದೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಆದೂರು ಪೊಲೀಸರು ದೇವರಡ್ಕ ಪುದಿಯಂಬಲಂ ಎಂಬಲ್ಲಿ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

You may also like

Leave a Comment