Home » ಸುಳ್ಯ:ಮಾರಕಾಸ್ತ್ರ ಸಹಿತ ಸಂಪಾಜೆಯ ಅರ್ಚಕರೊಬ್ಬರ ಮನೆಗೆ ನುಗ್ಗಿದ ದರೋಡೆಕೋರರ ತಂಡ!! ಬೊಂಡ ಕೆತ್ತುವ ಕತ್ತಿ ಹಿಡಿದು ಮಹಿಳೆಯರಿಗೆ ಬೆದರಿಕೆ-ಚಿನ್ನ ಸಹಿತ ನಗದು ಕಳ್ಳರ ಪಾಲು

ಸುಳ್ಯ:ಮಾರಕಾಸ್ತ್ರ ಸಹಿತ ಸಂಪಾಜೆಯ ಅರ್ಚಕರೊಬ್ಬರ ಮನೆಗೆ ನುಗ್ಗಿದ ದರೋಡೆಕೋರರ ತಂಡ!! ಬೊಂಡ ಕೆತ್ತುವ ಕತ್ತಿ ಹಿಡಿದು ಮಹಿಳೆಯರಿಗೆ ಬೆದರಿಕೆ-ಚಿನ್ನ ಸಹಿತ ನಗದು ಕಳ್ಳರ ಪಾಲು

0 comments

ಸುಳ್ಯ: ದರೋಡೆಕೋರರ ತಂಡವೊಂದು ಮಾರಾಕಸ್ತ್ರ ಹಿಡಿದು ಮನೆಗೆ ನುಗ್ಗಿ ಬೆದರಿಸಿ ಚಿನ್ನ ಸಹಿತ ನಗದು ದೋಚಿದ ಬೆಚ್ಚಿ ಬೀಳಿಸುವ ಘಟನೆಯೊಂದು ಸುಳ್ಯ ತಾಲೂಕಿನ ಸಂಪಾಜೆ ಎಂಬಲ್ಲಿ ಮಾರ್ಚ್ 20 ರ ರಾತ್ರಿ ನಡೆದಿದೆ.

ಸಂಪಾಜೆಯ ಅಂಬರೀಶ್ ಭಟ್ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ ಮಹಿಳೆಯರನ್ನು ಬೆದರಿಸಿ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಘಟನೆ ವೇಳೆ ಮನೆಯಲ್ಲಿ ಪುರುಷರು ಇಲ್ಲದೇ ಇದ್ದು, ಇದೇ ವೇಳೆಗೆ ದರೋಡೆಕೋರರು ನುಗ್ಗಿದ್ದರಿಂದ ಮಹಿಳೆಯರು ಅಸಹಾಯಕರಾಗಿ ಎಲ್ಲವನ್ನೂ ದರೋಡೆಕೋರರ ಕೈಗೆ ಕೊಟ್ಟಿದ್ದಾರೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ಬೆರಳಚ್ಚು ತಜ್ಞರು, ಶ್ವಾನ ದಳ ಭೇಟಿ ನೀಡಿದ್ದು, ಘಟನೆಯು ದ.ಕ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ.

You may also like

Leave a Comment