Home » ಬೆಳ್ಳಾರೆ : ತರಗತಿ ನಡೆಸುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದು ರಶೀದ್ ಮುಸ್ಲಿಯಾರ್ ಮೃತ್ಯು

ಬೆಳ್ಳಾರೆ : ತರಗತಿ ನಡೆಸುತ್ತಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದು ರಶೀದ್ ಮುಸ್ಲಿಯಾರ್ ಮೃತ್ಯು

by Praveen Chennavara
0 comments

ಸುಳ್ಯ : ತಾಲೂಕಿನ ಬೆಳ್ಳಾರೆಯ ತಂಬಿನಮಕ್ಕಿ ನಿವಾಸಿ ರಶೀದ್ ಮುಸ್ಲಿಯಾರ್ ತಂಬಿನಮಕ್ಕಿ (51 ವ.) ಹೃದಯಾಘಾತದಿಂದ ಜೂ.18 ರಂದು ನಿಧನರಾದರು.

ಜೂ.18 ರ ಮುಂಜಾನೆ ತಂಬಿನಮಕ್ಕಿ ಮನೆಯಿಂದ ಕಳಂಜ ಮಸೀದಿಗೆ ಹೋಗಿದ್ದು,ಅಲ್ಲಿ ಬೆಳಿಗ್ಗೆ 7.30 ಕ್ಕೆ ಮದರಸ ತರಗತಿ ನಡೆಸುತ್ತಿರುವ ಸಂದರ್ಭದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದರು .

ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ಮಾಡಾವು ಎಂಬಲ್ಲಿಗೆ ತಲುಪಷ್ಟರಲ್ಲಿ ಅವರು ಮೃತಪಟ್ಟರು ಎನ್ನಲಾಗಿದೆ.

ಕಳಂಜ ಬುಖ್ಯಾರಿಯ ಮದರಸ ಖತೀಬರು ಅಸೌಖ್ಯದಿಂದ ರಜೆಯಲ್ಲಿದ್ದ ಸಂದರ್ಭದಲ್ಲಿ ಮಸೀದಿ ಖತೀಬರಾಗಿ ಅವರ ಬದಲಿಗೆ ರಶೀದ್ ಮುಸ್ಲಿಯಾರ್ ಸೇವೆಯನ್ನು ಮಾಡುತ್ತಿದ್ದರು.

ಜೂ.17 ರಂದು ತಂಬಿನಮಕ್ಕಿ ಮಸೀದಿ ಪರಿಸರದಲ್ಲಿ ಮೃತಪಟ್ಟ ಕೆ.ಪಿ ಅಬ್ದುಲ ಅವರ ಮನೆಗೆ ಭೇಟಿಮಾಡಿದ್ದರು. ಅಲ್ಲಿಂದ ನನಗೆ ಸ್ವಲ್ಪ ಎದೆನೋವಿದೆ ನಾನು ಬೆಳಿಗ್ಗೆ ಬರುತ್ತೆನೆ ಎಂದು ತಂಬಿನಮಕ್ಕಿ ಮನೆಗೆ ತೆರಳಿದ್ದರು.

ಮೃತರು ಪತ್ನಿ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.

You may also like

Leave a Comment