Home » ಸುಳ್ಯ : ಲಾರಿಯಡಿಗೆ ಬಿದ್ದು ಸಾಯಲು ಪ್ರಯತ್ನಿಸಿದ ವ್ಯಕ್ತಿ ಚಿಕಿತ್ಸೆಫಲಕಾರಿಯಾಗದೇ ಇಂದು ಸಾವು!

ಸುಳ್ಯ : ಲಾರಿಯಡಿಗೆ ಬಿದ್ದು ಸಾಯಲು ಪ್ರಯತ್ನಿಸಿದ ವ್ಯಕ್ತಿ ಚಿಕಿತ್ಸೆಫಲಕಾರಿಯಾಗದೇ ಇಂದು ಸಾವು!

0 comments

ಸುಳ್ಯ: ನಿನ್ನೆ ಚಲಿಸುತ್ತಿದ್ದ ಲಾರಿಯ ಚಕ್ರದಡಿಗೆ ಯುವಕನೋರ್ವ ಹಾರಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಗಾಯಗೊಂಡ ಘಟನೆಯೊಂದು ನಡೆದಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಯುವಕ ಸಾವನ್ನಪ್ಪಿದ್ದಾನೆ.

ನಿನ್ನೆ ಮಧ್ಯಾಹ್ನದ ವೇಳೆ ತೆಂಗಿನಕಾಯಿ ತುಂಬಿಸಿಕೊಂಡು ಬರುತ್ತಿದ್ದ ಲಾರಿ ಸುಳ್ಯ ಪೇಟೆಯ ಗಾಂಧಿನಗರ ಬಳಿ ತಲುಪುತ್ತಿದ್ದಂತೆ ರಸ್ತೆ ಬದಿ ನಿಂತಿದ್ದ ಉತ್ತರಕನ್ನಡ ಮೂಲದ ಮಂಜುನಾಥ್ ಏಕಾಏಕಿ ರಸ್ತೆ ಮಧ್ಯೆ ಬಂದು ಲಾರಿಯ ಚಕ್ರದಡಿಗೆ ಹಾರಿದ್ದಾನೆ. ತಕ್ಷಣ ಎಚ್ಚೆತ್ತ ಲಾರಿ ಚಾಲಕ ಲಾರಿ ನಿಲ್ಲಿಸಿದ್ದಾನೆ.

ಘಟನೆಯಿಂದ ಯುವಕನ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿತ್ತು. ತಕ್ಷಣ ಆತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾನೆ. ಈ ಘಟನೆಯ ದೃಶ್ಯ ಸಿಸಿ ಕ್ಯಾಮಾರಾದಲ್ಲಿ ಸೆರೆಯಾಗಿತ್ತು.

You may also like

Leave a Comment