Home » ಸುಳ್ಯ : ನಾಲ್ಕು ದಿನದಿಂದ ರಸ್ತೆ ಬದಿಯಿದ್ದ ಕಾರಿನಲ್ಲಿ ಯುವಕನ ಶವ ಪತ್ತೆ

ಸುಳ್ಯ : ನಾಲ್ಕು ದಿನದಿಂದ ರಸ್ತೆ ಬದಿಯಿದ್ದ ಕಾರಿನಲ್ಲಿ ಯುವಕನ ಶವ ಪತ್ತೆ

by Praveen Chennavara
0 comments

ಸುಳ್ಯದ ಸರಕಾರಿ ಆಸ್ಪತ್ರೆಯ ಎದುರುಗಡೆ ನಿಂತಿರುವ ಕಾರಿನಲ್ಲಿ ಮೃತದೇಹವೊಂದು ಪತ್ತೆಯಾಗಿದ್ದು ಪೆರಾಜೆಯ ಪೆರಂಗಜೆ ಗೌರೀಶ ಎಂಬ ಯುವಕನದೆಂದು ಗೊತ್ತಾಗಿದೆ.

4 ದಿನಗಳ ಹಿಂದೆ ಅಂದರೆ ಗುರುವಾರ ದಿನ ಸಂಜೆ ಗೌರೀಶ ಕಾರಲ್ಲಿ ಬಂದು ಸರಕಾರಿ ಆಸ್ಪತ್ರೆಯ ಎದುರಿನ ಜಾಗದಲ್ಲಿ ಕಾರು ಪಾರ್ಕ್ ಮಾಡಿದ್ದನೆಂದೂ, ವಿಪರೀತ ಕುಡಿತದ ಪರಿಣಾಮವಾಗಿ ಶುಕ್ರವಾರ ದಿನ ಮೃತಪಟ್ಟಿರಬೇಕೆಂದೂ ಶಂಕಿಸಲಾಗಿದೆ. ಶವ ಬಾತುಕೊಂಡಿದ್ದು ವಾಸನೆ ಬರತೊಡಗಿದ ಹಿನ್ನಲೆಯಲ್ಲಿ ಆದಿತ್ಯವಾರ ಬೆಳಿಗ್ಗೆ ಅಕ್ಕಪಕ್ಕದವರಿಗೆ ವಿಷಯ ಗೊತ್ತಾಯಿತು.

ಪೊಲೀಸರಿಗೆ ವಿಷಯ ತಿಳಿದ ಎಸೈದಿಲೀಪ್ ರವರನ್ನು ಸಿಬ್ಬಂದಿಗಳ ಜತೆಗೆ ಬಂದು ಪರಿಶೀಲಿಸಿದರು.

ಪೆರಾಜೆಯ ಪೆರಂಗಜೆ ಲೋಕಯ್ಯ ಗೌಡರ ಮಗ ಗೌರೀಶ ( 30 ) ವಿಪರೀತ ಕುಡಿತದ ಚಟ ಹೊಂದಿದ್ದು, ಆತನ ಪತ್ನಿ ಆಶ್ರಮವೊಂದಕ್ಕೆ ಸೇರಿದ್ದಾರೆನ್ನಲಾಗಿದೆ. ಗೌರೀಶರಿಗೆ ಇಬ್ಬರು ಮಕ್ಕಳಿದ್ದಾರೆ.

You may also like

Leave a Comment