Home » ಮುತಾಲಿಕ್ ಸ್ಪರ್ಧೆ ಕಾರ್ಕಳದ ,ಹಿಂದುತ್ವದ ಹಿತಕ್ಕಲ್ಲ- ” ತನು- ಮನ-ಧನ”ಕ್ಕಾಗಿ – ಸುನಿಲ್ ಕುಮಾರ್ ಟಾಂಗ್

ಮುತಾಲಿಕ್ ಸ್ಪರ್ಧೆ ಕಾರ್ಕಳದ ,ಹಿಂದುತ್ವದ ಹಿತಕ್ಕಲ್ಲ- ” ತನು- ಮನ-ಧನ”ಕ್ಕಾಗಿ – ಸುನಿಲ್ ಕುಮಾರ್ ಟಾಂಗ್

by Praveen Chennavara
0 comments

ಬೆಂಗಳೂರು :ಪ್ರಮೋದ್ ಮುತಾಲಿಕ್ ಸ್ಪರ್ಧೆ ಕಾರ್ಕಳದ ಹಿತಕಲ್ಲ ,ಹಿಂದುತ್ವದ ಹಿತಕ್ಕಲ್ಲ- ತನು- ಮನ-ಧನ”ಕ್ಕಾಗಿ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಟಾಂಗ್ ನೀಡಿದ್ದಾರೆ.

ಸುನಿಲ್ ಕುಮಾರ್ ಈ ರೀತಿ ಹೇಳಿದ್ದಾರೆ.
ಮುತಾಲಿಕ್ ಅವರೇ ನೀವು ಆಮಿಷಕ್ಕೆ ಒಳಗಾಗಿಯೇ ಕಾರ್ಕಳದಿಂದ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದೀರಿ ಎಂದು ನಮಗೆ ಮೊದಲೇ ಅನುಮಾನವಿತ್ತು. ಅದೀಗ ನಿಜವಾಗಿದೆ !

ಸ್ವಂತ ಬುದ್ಧಿಯಿಂದ ನೀವು ನನ್ನ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂಬುದು ಈಗ ಸ್ಪಷ್ಟವಾಗಿದೆ.
ನೀವು ಕಾರ್ಕಳದಿಂದ ಸ್ಪರ್ಧೆಗೆ ಇಳಿಯುವುದನ್ನು ನಾನು ಮೊದಲೇ ಸ್ವಾಗತಿಸಿದ್ದೇನೆ. ಈಗ ನಿಮಗೆ ತನು ಮನ ಧನ ಸಹಾಯ ಮಾಡುವವರೂ ಕಾರ್ಕಳಕ್ಕೆ ಬಂದು ಪ್ರಚಾರ ಮಾಡಲಿ ಎಂದು ನಾನು ಆಶಿಸುತ್ತೇನೆ.

ನಿಮ್ಮ ಸ್ಪರ್ಧೆಯ ಉದ್ದೇಶ ಏನೆಂಬುದನ್ನು ಕೆಲ ದಿನಗಳ ಹಿಂದೆ ” ವೋಟು, ನೋಟು” ಹೇಳಿಕೆಯ ಮೂಲಕ ತಿಳಿಸಿದ್ದಿರಿ. ಈಗ ತನುಮನಧನ ಸಹಾಯವಿದೆ ಎಂದು ಹೇಳುತ್ತಿದ್ದೀರಿ. ಒಟ್ಟಾರೆಯಾಗಿ ನಿಮ್ಮ‌ಈ ಸ್ಪರ್ಧೆಯ ಉದ್ದೇಶ ಕಾರ್ಕಳದ ಹಿತವಲ್ಲ, ಹಿಂದುತ್ವದ ಹಿತವಲ್ಲ, ಜನತೆಯ ಹಿತವೂ ಅಲ್ಲ. ಅದು ” ತನು- ಮನ-ಧನ” – ನೋಟಿಗಾಗಿ ಎಂಬುದು ನಿಮ್ಮ ಹೇಳಿಕೆಯಲ್ಲೇ ಸ್ಪಷ್ಟವಾಗಿದೆ ಎಂದು ಹೇಳಿದ್ದಾರೆ.

You may also like

Leave a Comment