Home » ತಲಪಾಡಿ:ಹಿಂದೂ ಯುವತಿಯರಿಗೆ ಪೀಡಿಸಿದ ಮುಸ್ಲಿಂ ಯುವಕನಿಗೆ ಸಿಕ್ಕಿತು ಬಿಸಿಬಿಸಿ ಕಜ್ಜಾಯ!! ಕಳೆದ ವಾರ ತಪ್ಪಿಸಿಕೊಂಡು ಓಡಿದಾತ ಈ ವಾರ ಇನ್ನೊರ್ವಳನ್ನು ಚೂಡಾಯಿಸಿ ಸಿಕ್ಕಿಬಿದ್ದ

ತಲಪಾಡಿ:ಹಿಂದೂ ಯುವತಿಯರಿಗೆ ಪೀಡಿಸಿದ ಮುಸ್ಲಿಂ ಯುವಕನಿಗೆ ಸಿಕ್ಕಿತು ಬಿಸಿಬಿಸಿ ಕಜ್ಜಾಯ!! ಕಳೆದ ವಾರ ತಪ್ಪಿಸಿಕೊಂಡು ಓಡಿದಾತ ಈ ವಾರ ಇನ್ನೊರ್ವಳನ್ನು ಚೂಡಾಯಿಸಿ ಸಿಕ್ಕಿಬಿದ್ದ

0 comments

ತಲಪಾಡಿ: ಕಳೆದ ವಾರ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿ ತಪ್ಪಿಸಿಕೊಂಡಿದ್ದ ಯುವಕನೋರ್ವ ಇಂದು ಅದೇ ಚಾಳಿ ಮತ್ತೆ ಮುಂದುವರಿಸಿ, ಸಾರ್ವಜನಿಕರ ಕೈಯ್ಯಲ್ಲಿ ಸಿಕ್ಕಿ ಕಜ್ಜಾಯ ತಿಂದ ಬಳಿಕ ಸಾರ್ವಜನಿಕರೇ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದು, ಸದ್ಯ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.

ಘಟನೆ ವಿವರ:ಕಾಸರಗೋಡು ಜಿಲ್ಲೆಯ ಮಂಜೇಶ್ವರ ಹೊಸಬೆಟ್ಟು ನಿವಾಸಿ ಮುಸ್ತಫಾ ಎಂಬಾತ ಕಳೆದ ಶನಿವಾರದಂದು ತಲಪಾಡಿಯ ಒಳರಸ್ತೆಯಲ್ಲಿ ಯುವತಿಯೊಬ್ಬಳನ್ನು ಚುಡಾಯಿಸಿ ಕಾಲ್ಕಿತ್ತಿದ್ದ.ಈತನ ಚಹರೆ ಪಕ್ಕದಲ್ಲೇ ಇರುವ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.

ಅಂದು ತಪ್ಪಿಸಿಕೊಂಡ ಆತ ಇಂದು ಪುನಃ ಅದೇ ಪರಿಸರದಲ್ಲಿ ಕಾಣಿಸಿಕೊಂಡಿದ್ದು ತನ್ನ ಸ್ಕೂಟಿಯಲ್ಲಿ ಬಂದು ಭಜನಾ ಮಂದಿರದ ಬಳಿ ಯುವತಿಯೊಬ್ಬಳಿಗೆ ಕಿರುಕುಳ ನೀಡಿ ಪರಾರಿಯಾಗಲು ಯತ್ನಿಸಿದ್ದ. ಕೂಡಲೇ ಎಚ್ಚೆತ್ತ ಸ್ಥಳೀಯರು ಆತನನ್ನು ಹಿಡಿದು ತಮ್ಮ ಪಾಲಿನದನ್ನು ಕೊಟ್ಟು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆರೋಪಿ ಮುಸ್ತಫಾ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಸಹಿತ ಇನ್ನಿತರ ಪ್ರಕರಣ ದಾಖಲಾಗಿದೆ.

You may also like

Leave a Comment