Home » ದೈವರಾಧನೆಗೆ ಅವಮಾನ : ಚಪ್ಪಲಿ ಹಾಕಿಕೊಂಡು ದೈವದ ದೀವಟಿಗೆ ನಿಂತ ಸಂಸದ ತೇಜಸ್ವಿ ಸೂರ್ಯ

ದೈವರಾಧನೆಗೆ ಅವಮಾನ : ಚಪ್ಪಲಿ ಹಾಕಿಕೊಂಡು ದೈವದ ದೀವಟಿಗೆ ನಿಂತ ಸಂಸದ ತೇಜಸ್ವಿ ಸೂರ್ಯ

0 comments

ಬೆಂಗಳೂರು: ದೈವರಾಧನೆಗೆ ಸಂಸದ ತೇಜಸ್ವಿ ಸೂರ್ಯ ಅವರು ಅವಮಾನ ಮಾಡಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿದೆ.ಹೌದು. ಚಪ್ಪಲಿ ಹಾಕಿಕೊಂಡು ತೇಜಸ್ವಿ ಅವರು ದೈವದ ದೀವಟಿಗೆ ನಿಂತ ಫೋಟೋವೊಂದು ಸಾಮಾಜಿಕ ಜಾಲತಾಣ (Social Media) ಗಳಲ್ಲಿ ವೈರಲ್ ಆಗುತ್ತಿದೆ. ನಿನ್ನೆ ಬೆಂಗಳೂರಿನಲ್ಲಿ ರಾಷ್ಟ್ರೋತ್ಥಾನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೈವರಾಧನೆಯ ಕಾರ್ಯಕ್ರಮವಿತ್ತು.

ಇದರಲ್ಲಿ ತೇಜಸ್ವಿ ಅವರು ಚಪ್ಪಲಿ ಧರಿಸಿ ದೈವದ ದೀವಟಿಕೆ ಹಿಡಿದು ಫೋಟೋಗೆ ಪೋಸ್ ಕೊಟ್ಟಿರುವುದನ್ನು ನಾವು ಕಾಣಬಹುದಾಗಿದೆಫೋಟೋ ವೈರಲ್ ಬೆನ್ನಲ್ಲೇ ದೈವಾರಾಧನೆಗೆ ತೇಜಸ್ವಿ ಅವಮಾನ ಮಾಡಿದ್ದಾರೆ ಅಂತಾ ಆಕ್ರೋಶ ಹೊರಬಿದ್ದಿದೆ. ಸದ್ಯ ಈ ಫೋಟೊವನ್ನು ಸಾಮಾಜಿಕ ಜಾಲತಾಣದಿಂದ ಸಂಸದರು ಡಿಲೀಟ್ ಮಾಡಿದ್ದಾರೆ.

You may also like

Leave a Comment