Home » Mangaluru : ಪಾಳು ಬಿದ್ದ ಬಾವಿಕಟ್ಟೆ ಮೇಲೆ ಕುಳಿತು ಸ್ನೇಹಿತರೊಂದಿಗೆ ಮಾತು – ಆಯತಪ್ಪಿ ಬಾವಿಗೆ ಬಿದ್ದು ಮೀನುಗಾರ ಮೃತ್ಯು !!

Mangaluru : ಪಾಳು ಬಿದ್ದ ಬಾವಿಕಟ್ಟೆ ಮೇಲೆ ಕುಳಿತು ಸ್ನೇಹಿತರೊಂದಿಗೆ ಮಾತು – ಆಯತಪ್ಪಿ ಬಾವಿಗೆ ಬಿದ್ದು ಮೀನುಗಾರ ಮೃತ್ಯು !!

1 comment

Mangaluru : ಸಮುದ್ರ ತೀರದ ಬಳಿ ಇರುವ ಪಾಳು ಬಿದ್ದ ಬಾವಿಗೆ ಆಯತಪ್ಪಿ ಬಿದ್ದು ಸ್ಥಳೀಯ ಮೀನುಗಾರರೊಬ್ಬರು ಸಾವನಪ್ಪಿದ ಘಟನೆ ಸೋಮೇಶ್ವರ ಉಚ್ಚಿಲದಲ್ಲಿ ನಡೆದಿದೆ.

 

ಹೌದು, ಸೋಮೇಶ್ವರ ಉಚ್ಚಿಲ ಬೀಚ್ ಬಳಿಯ ಪಾಳು ಬಿದ್ದ ಬಾವಿಯ ಕಟ್ಟೆಯಲ್ಲಿ ಕುಳಿತು ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಸ್ಥಳೀಯ ಮೀನುಗಾರರೋರ್ವರು ಆಯತಪ್ಪಿ ಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬುಧವಾರ(ಜ.1) ನಡೆದಿದೆ. ಉಚ್ಚಿಲ ಬೀಚ್ ನಿವಾಸಿ ಶಶೀಂದ್ರ.ಎಮ್ ಉಚ್ಚಿಲ್ (74)ಸಾವನ್ನಪ್ಪಿರುವ ಮೀನುಗಾರ.

 

ಶಶೀಂದ್ರ ಅವರು ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದು, ಮಂಗಳವಾರ ಸಂಜೆ ಸ್ನೇಹಿತನೊಂದಿಗೆ ಬೀಚ್ ಬಳಿಯ ಪಾಳು ಬಿದ್ದ ಬಾವಿಯ ಕಟ್ಟೆಯಲ್ಲಿ ಕುಳಿತು ಮಾತನಾಡುತ್ತಿದ್ದಂತೆ ಆಯ ತಪ್ಪಿ ಬಾವಿಯೊಳಗೆ ಬಿದ್ದಿದ್ದಾರೆ. ನುರಿತ ಈಜುಗಾರರಾದ ಶಶೀಂದ್ರ ಅವರು ತಲೆಕೆಳಗಾಗಿ ಬಾವಿಗೆ ಬಿದ್ದಿದ್ದು, ಬಾವಿಯೊಳಗೆ ಕೇವಲ ಮೂರಡಿಯಷ್ಟು ನೀರಿದ್ದ ಪರಿಣಾಮ ತಲೆಗೆ ಗಂಭೀರ ಏಟು ತಗುಲಿ ಸಾವನ್ನಪ್ಪಿದ್ದಾರೆ.

 

ಬಳಿಕ ಸ್ಥಳೀಯರೆ ಮೃತದೇಹವನ್ನ ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಉಳ್ಳಾಲ ಪೊಲೀಸರು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಶಶೀಂದ್ರ ಅವರು ಪತ್ನಿ, ಇಬ್ಬರು ಪುತ್ರಿಯರನ್ಬು ಅಗಲಿದ್ದಾರೆ.

You may also like

Leave a Comment