Home » ಸುಬ್ರಮಣ್ಯ: ಮನೆ ಮಂದಿ ಭೂತಕೋಲಕ್ಕೆ ಹೋಗಿದ್ದಾಗ ಕಳ್ಳತನ !

ಸುಬ್ರಮಣ್ಯ: ಮನೆ ಮಂದಿ ಭೂತಕೋಲಕ್ಕೆ ಹೋಗಿದ್ದಾಗ ಕಳ್ಳತನ !

0 comments

ಸುಬ್ರಮಣ್ಯ : ಮನೆ ಮಂದಿ ಭೂತಕೋಲಕ್ಕೆಂದು ತೆರಳಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ ಕಳ್ಳರು ಲಾಪ್ ಟಾಪ್ ಹಾಗೂ ನಗದು ದೋಚಿ ಪರಾರಿಯಾದ ಘಟನೆ ಬಿಳಿನೆಲೆ ಗ್ರಾಮದ ಕೈಕಂಬ ಕಳಿಗ ಎಂಬಲ್ಲಿ ನಡೆದಿದೆ.

ಇಲ್ಲಿನ ಹೊನ್ನಯ ಗೌಡ ಅವರು ಪತ್ನಿ ಹಾಗೂ ಮಕ್ಕಳೊಂದಿಗೆ ಕುಟುಂಬದವರಾದ ನಾರಾಯಣ ಎಂಬುವರ ಮನೆಗೆ ಭೂತದ ಕೋಲ ಕಾರ್ಯಕ್ರಮಕ್ಕೆ ಹೋಗಿದ್ದರು. ಭೂತ ಕೋಲ ಮುಗಿಸಿ ರಾತ್ರಿ 10-45 ವೇಳೆಗೆ ತಮ್ಮ ಮಗನೊಂದಿಗೆ ಮನೆ ಬಂದಾಗ ಮನೆಯ ಎದುರಿನ ಬಾಗಿಲು ತೆರೆದಿದ್ದು ಮನೆಯ ಒಳಗೆ ಬಟ್ಟೆ ಬರೆಗಳು ಚೆಲ್ಲಾಪಿಲ್ಲಿಯಾಗಿರುವುದು ಗಮನಕ್ಕೆ ಬಂದಿದೆ.

ಮನೆ ಎದುರಿನ ಬಾಗಿಲು ಮುರಿದು ಮನೆಯ ಒಳಗೆ ನುಗ್ಗಿದ ಕಳ್ಳರು ಕಪಾಟಿನಲ್ಲಿ ಇದ್ದ ನಗದು 22 ಸಾವಿರ ನಗದು, ಮೇಜಿನ ಇಟ್ಟಿದ್ದ ಒಂದು ಲ್ಯಾಪ್ ಟಾಪ್, ಡ್ರಾವರ್ ನಲ್ಲಿ ಇದ್ದ ಪರ್ಸ್ ಹಾಗೂ ಇತರೆ ವಸ್ತುಗಳನ್ನು ಕಳ್ಳತನಗೈದಿದ್ದಾರೆ. ಒಟ್ಟು ಅಂದಾಜು 80,000/- ಮೌಲ್ಯದ ವಸ್ತುಗಳನ್ನು ಕಳವುಗೈದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

You may also like

Leave a Comment