Home » ಬಂಟ್ವಾಳ : ಟಿಕ್ ಟಾಕ್ ಸ್ಟಾರ್ ಖ್ಯಾತಿಯ ಕಮಲಜ್ಜಿ ನಿಧನ

ಬಂಟ್ವಾಳ : ಟಿಕ್ ಟಾಕ್ ಸ್ಟಾರ್ ಖ್ಯಾತಿಯ ಕಮಲಜ್ಜಿ ನಿಧನ

0 comments

ಬಂಟ್ವಾಳ : ಟಿಕ್ ಟಾಕ್ ಅಜ್ಜಿ ಎಂದೇ ಪ್ರಖ್ಯಾತರಾಗಿದ್ದ 86 ವರ್ಷ ವಯಸ್ಸಿನ ಕಮಲ ಅವರು ಬುಧವಾರ ಸಂಜೆ ನಿಧನರಾದರು.

ಸಂಜೆ 4.30 ರ ಸುಮಾರಿಗೆ ಅವರು ನಿಧನರಾಗಿದ್ದು‌ ನಾಳೆ ಬೆಳಗ್ಗೆ‌ ಧನರಾಜ್ ಅವರ ಅನಂತಾಡಿಯ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಧನರಾಜ್ ಆಚಾರ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಅಜ್ಜಿ ಇನ್ನು ನೆನಪು ಮಾತ್ರ. ಅಜ್ಜಿ ಜೊತೆ ವೀಡಿಯೋ ಮಾಡು ಅನ್ನೋ ನಿಮ್ಮೆಲ್ಲರ ಬೇಡಿಕೆಯನ್ನು ಕೇಳದೆ ಹೊರಟು ಹೋದರು ಎಂದು ಧನರಾಜ್ ನೋವು ತೋಡಿಕೊಂಡಿದ್ದಾರೆ.

ಮೃತರು ಆರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ. ಯೂಟ್ಯೂಬರ್ ಧನರಾಜ್ ಅಚಾರ್ ಜೊತೆ 50 ಕ್ಕೂ ಅಧಿಕ ವೀಡಿಯೋಗಳಲ್ಲಿ ಕಾಣಿಸಿಕೊಂಡಿದ್ದರು.

You may also like

Leave a Comment