Home » Mangaluru : ಮಂಗಳೂರಿನಲ್ಲಿ ಘೋರ ದುರಂತ : ರೆಸಾರ್ಟ್​ನ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ದುರ್ಮರಣ

Mangaluru : ಮಂಗಳೂರಿನಲ್ಲಿ ಘೋರ ದುರಂತ : ರೆಸಾರ್ಟ್​ನ ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ದುರ್ಮರಣ

0 comments

Mangaluru: ಈಜುಕೊಳದಲ್ಲಿ ಮುಳುಗಿ ಮೂವರು ಯುವತಿಯರು ಸಾವನ್ನಪ್ಪಿರುವ ಘಟನೆ ಮಂಗಳೂರು ಹೊರವಲಯದ ಉಚ್ಚಿಲ ಬೀಚ್ ಬಳಿಯ ಖಾಸಗಿ ಬೀಚ್ ರೆಸಾರ್ಟ್​ನಲ್ಲಿ ನಡೆದಿದೆ.

ಹೌದು, ಮಂಗಳೂರಿನಲ್ಲಿ(Mangaluru )ಘೋರ ದುರಂತವೊಂದು ಸಂಭವಿಸಿದ್ದು, ಮೂವರು ಯುವತಿಯರು ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಯುವತಿಯರನ್ನು ಮೈಸೂರು ಮೂಲದವರು ಎನ್ನಲಾಗಿದೆ.

ಮೃತ ಯುವತಿಯರನ್ನು ಮೈಸೂರು ಮೂಲದವರು ಎಂದು ಗುರುತಿಸಲಾಗಿದ್ದು, ಕುರುಬರಹಳ್ಳಿಯ ನಿವಾಸಿ ನಿಶಿತಾ ಎಂಡಿ (21), ವಿಜಯನಗರದ ದೇವರಾಜ ಮೊಹಲ್ಲಾದ ಪಾರ್ವತಿ (20), ಮೈಸೂರಿನ ಕೆ.ಆರ್. ಮೊಹಲ್ಲಾದ ಕೀರ್ತನಾ (20) ಎಂದು ಗುರುತಿಸಲಾಗಿದೆ.

ಅಂದಹಾಗೆ ಮೈಸೂರು ಮೂಲದ ಯುವತಿಯರು ನಿನ್ನೆ(ನವೆಂಬರ್ 16) ಬೆಳಗ್ಗೆ ಬೀಚ್ ರೆಸಾರ್ಟ್ ಗೆ ಆಗಮಿಸಿ ಕೊಠಡಿ ಪಡೆದಿದ್ದು, ಇಂದು (ನವೆಂಬರ್ 17) ಬೆಳಿಗ್ಗೆ 8.30ರ ಸುಮಾರಿಗೆ ಸ್ವಿಮ್ಮಿಂಗ್ ಫೂಲ್​ನಲ್ಲಿ ಆಟವಾಡುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಸ್ವಿಮ್ಮಿಂಗ್ ಫೂಲ್ ನಲ್ಲಿ ಒಂದು ಬದಿ ಆರು ಅಡಿಯಷ್ಟು ಆಳವಿತದ್ದು, ಈ ವೇಳೆ ಆಯಾತಪ್ಪಿ ಓರ್ವ ಯುವತಿ ಮುಳುಗಿರುವ ಸಾಧ್ಯತೆ ಇದ್ದು, ಆಕೆಯ ರಕ್ಷಣೆಗೆ ತೆರಳಿದ ಉಳಿದ ಇಬ್ಬರೂ ಮುಳುಗಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

You may also like

Leave a Comment