Home » ‘ಮೈನಾ ಕಾಕ’ ಅಂತಿಮ ಯಾತ್ರೆಗೆ ಗೌರವ ಸಲ್ಲಿಸಿದ ಹಿಂದೂ ಬಾಂಧವರು| ಓಕುಳಿ ನೃತ್ಯದಲ್ಲಿದ್ದ ಹಿಂದೂ ಬಾಂಧವರು ದಾರಿ ಬಿಟ್ಟು ಗೌರವ ಸೂಚನೆ| ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡ್ತಿದೆ ಈ ವೀಡಿಯೋ

‘ಮೈನಾ ಕಾಕ’ ಅಂತಿಮ ಯಾತ್ರೆಗೆ ಗೌರವ ಸಲ್ಲಿಸಿದ ಹಿಂದೂ ಬಾಂಧವರು| ಓಕುಳಿ ನೃತ್ಯದಲ್ಲಿದ್ದ ಹಿಂದೂ ಬಾಂಧವರು ದಾರಿ ಬಿಟ್ಟು ಗೌರವ ಸೂಚನೆ| ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡ್ತಿದೆ ಈ ವೀಡಿಯೋ

0 comments

ಪುತ್ತೂರು : ಹಿಜಾಬ್ ಕೇಸರಿ ಶಾಲು ನಡುವಿನ ಸಂಘರ್ಷದ ಮಧ್ಯದಲ್ಲೊಂದು ಸೌಹಾರ್ದಯುತ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ.

ಜೆಎಸ್ ಬಿ ಸಮುದಾಯದ ಓಕುಳಿ ಮೆರವಣಿಗೆ ಮುಖ್ಯ ರಸ್ತೆಯಲ್ಲಿ ಸಾಗುತ್ತಿತ್ತು. ಈ ಸಂದರ್ಭದಲ್ಲಿ ನಿಧನರಾಗಿದ್ದ ಉಪ್ಪಿನಂಗಡಿಯ ಹಿರಿಯ ವರ್ತಕ ಮೈನಾ ಹಾಜಿ ಹಸನಬ್ಬ ಅವರ ಮೃತ ಶರೀರವನ್ನು ಅದೇ ಮುಖ್ಯ ರಸ್ತೆಯಲ್ಲಿ ಮುಸಲ್ಮಾನ ಬಾಂಧವರು ಪಾದಯಾತ್ರೆಯಲ್ಲಿ ಹೊತ್ತುಕೊಂಡು ಬಂದಾಗ ಜಿ ಎಸ್ ಬಿ ಬಾಂಧವರು ಇದೇ ವೇಳೆ ತಕ್ಷಣವೇ ತಮ್ಮ ಡೋಲು, ವಾದ್ಯ ಮತ್ತು ಬಣ್ಣ ಹಚ್ಚುವಿಕೆಯನ್ನು ನಿಲ್ಲಿಸಿ ಮೃತ ಶರೀರದ ಪಾದಯಾತ್ರೆಗೆ ಅನುವು ಮಾಡಿಕೊಟ್ಟಿದ್ದಾರೆ.

ಅಂತಿಮ ಯಾತ್ರೆ ಬರುತ್ತಿದ್ದಂತೆ ಚೆಂಡೆ, ಬ್ಯಾಂಡ್, ವಾದ್ಯ ಸದ್ದು ಒಮ್ಮೆಲೇ ನಿಲ್ಲಿಸಿ ಬದಿಗೆ ನಿಂತು ಮೌನವಾಗಿ ಎದೆ ಮೇಲೆ ಕೈ ಇಟ್ಟು ಮೈನಾ ಕಾಕಾನಿಗೆ ಗೌರವ ಸಲ್ಲಿಸಿದ್ದಾರೆ.

ಈ ಒಂದು ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇದು ಸೌಹಾರ್ದತೆಯನ್ನು ಎತ್ತಿ ತೋರಿಸುತ್ತದೆ. ವೆಂಕಟ್ರಮನ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ಸಂಭ್ರಮದ ಪ್ರಯುಕ್ತ ಭಕ್ತರು ಸಂಭ್ರಮದಲ್ಲಿದ್ದರು.

ರಾಜ್ಯದಲ್ಲಿ ಕೋಮುಗಲಭೆ ನಡೆಯುತ್ತಿರುವಾಗ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಭಕ್ತರ ಈ ಉದಾತ್ತ ವರ್ತನೆ ಹಲವಾರು ಕಡೆಯಿಂದ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ.

You may also like

Leave a Comment