Home » Udupi: ಪ್ರಸಿದ್ಧ ದೈವ ನರ್ತಕ ಸಾಧು ಪಾಣಾರ ಮಂಚಿಕೆರೆ ನಿಧನ

Udupi: ಪ್ರಸಿದ್ಧ ದೈವ ನರ್ತಕ ಸಾಧು ಪಾಣಾರ ಮಂಚಿಕೆರೆ ನಿಧನ

2 comments

Udupi: ಪ್ರಸಿದ್ಧ ದೈವ ನರ್ತಕ, ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಧು ಪಾಣಾರ ಮಂಚಿಕೆರೆ ಅವರು ಅಸೌಖ್ಯದಿಂದ ಇಂದು (ಪೆ.12) ರಂದು ನಿಧನ ಹೊಂದಿದರು.

ಉಡುಪಿ ಜಿಲ್ಲೆ (Udupi)ಯ ಅಲೆವೂರು ಗ್ರಾಮದ ಮಂಚಿಕೆರೆಯ ದೈವಾರಾಧಕ ಸಾಧು ಅವರಿಗೆ 68 ವರ್ಷ ವಯಸ್ಸಾಗಿತ್ತು. ಇವರು 45 ವರ್ಷಗಳಿಂದ ದೈವಾರಾಧನೆಯಲ್ಲಿ ತೊಡಗಿಸಿಕೊಂಡಿದ್ದರು.

ಜುಮಾದಿ, ವ್ಯಾಘ್ರ ಚಾಮುಂಡಿ, ಕಲ್ಲುಕುಟ್ಟಿಗ, ಪಂಜುರ್ಲಿ, ಬಗ್ಗು, ಪಂಜುರ್ಲಿ, ಬೊಬ್ಬರ್ಯ, ಮಲೆಧೂಮಾವತಿ ದೈವಗಳ ಸೇವೆ ಇವರು ಸಲ್ಲಿಸಿದ್ದಾರೆ.

ಸಾಧುಪಾಣಾರ ಅವರು ಪತ್ನಿ , ಪುತ್ರ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಇದನ್ನೂ ಓದಿ : ವಿಧಾನಸಭೆಯಲ್ಲಿ ಬಿಜೆಪಿಯಿಂದ ʼಜೈ ಶ್ರೀರಾಮ್‌ʼ ಕಾಂಗ್ರೆಸ್‌ನಿಂದ ʼಜೈ ಭೀಮ್‌ʼ ಘೋಷಣೆ

You may also like

Leave a Comment