Home » ಉಡುಪಿ ಶ್ರೀಕೃಷ್ಣ ಮಠದ ದೇವರ ದರ್ಶನ ಪಡೆಯಲು ಬಂದ ವ್ಯಕ್ತಿ ಕೃಷ್ಣೈಕ್ಯ

ಉಡುಪಿ ಶ್ರೀಕೃಷ್ಣ ಮಠದ ದೇವರ ದರ್ಶನ ಪಡೆಯಲು ಬಂದ ವ್ಯಕ್ತಿ ಕೃಷ್ಣೈಕ್ಯ

0 comments

ಉಡುಪಿ ಶ್ರೀಕೃಷ್ಣ ಮಠದಲ್ಲಿ ದೇವರ ದರ್ಶನ ಪಡೆಯಲೆಂದು ಬಂದಿದ್ದ ಭಕ್ತರೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಬೆಂಗಳೂರು ಮೂಲದ ಮೋಹನ್ (70) ಮೃತ ಭಕ್ತರು  ಶ್ರೀಕೃಷ್ಣ ಮಠದಲ್ಲಿ ದೇವರ ದರ್ಶನ ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದರು. ಸಾಲಿನಲ್ಲಿ ಸಾಗುವಾಗ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ.

ಕುಸಿದು ಬಿದ್ದ ಮೋಹನ್ ಅವರನ್ನು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರು ಮೃಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಹಲವರು ಉತ್ತಮ ಸಾವು. ದೇವರು ನೋಡಲು ಬಂದ ವ್ಯಕ್ತಿ ದೇವರ ಬಳಿಯೇ ಹೋದ. ಪುಣ್ಯದ ಸಾವು ಎನ್ನುತ್ತಿದ್ದಾರೆ.

You may also like

Leave a Comment