Home » ಬೆಳ್ತಂಗಡಿ : ಚಿಕ್ಕಮ್ಮನ ಮನೆಯಿಂದ ಕುಂದಾಪುರಕ್ಕೆ ಹೋಗುತ್ತೇನೆಂದ ಯುವತಿ ಚಿನ್ನಾಭರಣದೊಂದಿಗೆ ನಾಪತ್ತೆ!

ಬೆಳ್ತಂಗಡಿ : ಚಿಕ್ಕಮ್ಮನ ಮನೆಯಿಂದ ಕುಂದಾಪುರಕ್ಕೆ ಹೋಗುತ್ತೇನೆಂದ ಯುವತಿ ಚಿನ್ನಾಭರಣದೊಂದಿಗೆ ನಾಪತ್ತೆ!

0 comments

ಬೆಳ್ತಂಗಡಿ: ಉಜಿರೆ ಗ್ರಾಮದ ರೆಂಜಾಳ ಎರ್ನೋಡಿ ನಾರಾಯಣ ಎಂಬವರ ಪುತ್ರಿ ದಿವ್ಯಶ್ರೀ (24) ಉಡುಪಿಯ ಮಾರುತಿ ಶೋರೂಂ ನಲ್ಲಿ ಕೆಲಸ ಮಾಡುತ್ತಿದ್ದಳು. ಈಗ ವರ್ಕ್ ಫ್ರಮ್ ಹೋಮ್ ಎಂದು ಮನೆಯಲ್ಲಿ ಕೆಲಸ ಮಾಡಿಕೊಂಡು 15 ದಿನಗಳಿಗೊಮ್ಮೆ ಉಡುಪಿಗೆ ಕೆಲಸದ ವಿಷಯಕ್ಕೆ ಹೋಗಿ ಬರುತ್ತಿದ್ದಳು.

ಆದರೆ ಸೋಮವಾರ (ತಾ.11.04.2022) ರಂದು ಬೆಳಿಗ್ಗೆ ಉಡುಪಿಗೆಂದು ಮನೆಯಿಂದ ಹೋದವಳು ಸಂಬಂಧಿಕರ ಮನೆಯಾದ ಬಜಗೋಳಿಯ ಆಕೆಯ ಚಿಕ್ಕಮ್ಮ ಭಾರತಿ ಎಂಬುವವರ ಮನೆಯಲ್ಲಿ ಸ್ವಲ್ಪ ದಿನ ಉಳಿದುಕೊಂಡಿದ್ದಳು. 15.04.2022 ರಂದು ಬೆಳಿಗ್ಗೆ ಏಳೂವರೆ ಸಮಯಕ್ಕೆ ಬಜಗೋಳಿಯಿಂದ ಕುಂದಾಪುರಕ್ಕೆ ಹೋಗಿ ಬರುತ್ತೇನೆಂದು ಚಿಕ್ಕಮ್ಮನಲ್ಲಿ ಹೇಳಿ ಹೊರ ಹೋದವಳು ಅತ್ತ ಮನೆಗೂ ಬಾರದೇ ಇತ್ತ ಸಂಬಂಧಿಕರ ಮನೆಗೂ ಬಂದಿಲ್ಲ.

ಆಕೆಯ ಪೋನ್ ಕೂಡಾ  ಸ್ವಿಚ್ ಆಫ್ ಅಂತಾ ಬಂದಿದೆ. ಅಲ್ಲದೇ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕೂಡ ಕೊಂಡೊಯ್ದಿದ್ದಾಳೆ ಎನ್ನಲಾಗಿದೆ. ಈ ಬಗ್ಗೆ ಆಕೆಯ ತಂದೆ ಬೆಳ್ತಂಗಡಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

You may also like

Leave a Comment