Home » ಉಳ್ಳಾಲ: ಮಾವಿನ ಕಾಯಿ ಕೀಳಲು ಮರ ಹತ್ತಿದಾಗ ದುರ್ಘಟನೆ!! ವಿದ್ಯುತ್ ಪ್ರವಹಿಸಿ ಯುವಕ ಮರದಲ್ಲೇ ಮೃತ್ಯು

ಉಳ್ಳಾಲ: ಮಾವಿನ ಕಾಯಿ ಕೀಳಲು ಮರ ಹತ್ತಿದಾಗ ದುರ್ಘಟನೆ!! ವಿದ್ಯುತ್ ಪ್ರವಹಿಸಿ ಯುವಕ ಮರದಲ್ಲೇ ಮೃತ್ಯು

0 comments

ಉಳ್ಳಾಲ: ಮಾವಿನಕಾಯಿ ಕೀಳಲು ಮರಹತ್ತಿದ ಯುವಕನೋಬ್ಬ ವಿದ್ಯುತ್ ತಂತಿ ತಗಲಿ ಸಾವನ್ನಪ್ಪಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಜಲಾಲ್ ಬಾಗ್ ನಲ್ಲಿ ಸಂಜೆ ವೇಳೆ ನೆಡೆದಿದೆ.

ಮಹಮ್ಮದ್ ಇಲಿಯಾಸ್ (21) ಸಾವನ್ನಪ್ಪಿದವರು. ಸಂಜೆ ವೇಳೆ ಮನೆ ಸಮೀಪದ ಕಂಪೌಂಡಿನಲ್ಲಿರುವ ಮಾವಿನಮರಕ್ಕೆ ಹಣ್ಣು ಕೀಳಲೆಂದು ತೆರಳಿದ ಸಂದರ್ಭ ಘಟನೆ ಸಂಭವಿಸಿದೆ.

ಯುವಕನ ಸಾವಿಗೆ ಮೆಸ್ಕಾಂ ಇಲಾಖೆಯೇ ಕಾರಣ ಎಂದು ಸ್ಥಳೀಯರು ಆರೋಪ .

ಮಾವಿನ ಮರದ ಮೇಲೆ ವಿದ್ಯುತ್ ತಂತಿ ಹಾದುಹೋಗಿದ್ದರೂ ಅದನ್ನು ಕಟಾವು ಮಾಡದೇ ಇರುವುದು ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ.

You may also like

Leave a Comment