Ullal :ಉಳ್ಳಾಲದಲ್ಲಿ(Ullal) ಸಮುದ್ರಕ್ಕೆ ಹಾರಿ ಮಗ ಪ್ರಾಣ ಬಿಟ್ಟರೆ, ಕೆಲವೇ ದಿನಗಳಲ್ಲಿ ಮಗನ ದಾರಿಯಲ್ಲೇ ಕಡಲ ಮಾರ್ಗ ಹಿಡಿದು ತಂದೆ ಸಾವಿನ(Death )ಕದ ತಟ್ಟಿದ ದಾರುಣ ಘಟನೆ ನಡೆದಿದೆ.
ಕಳೆದ ಜುಲೈ 10 ರಂದು ರಾಜೇಶ್ ಎಂಬ ವ್ಯಕ್ತಿ ನಾಪತ್ತೆಯಾಗಿದ್ದರು. ಆಬಳಿಕ ರಾಜೇಶ್ ನ ಮೃತದೇಹ ಜುಲೈ 12 ರಂದು ಬೆಳಗ್ಗೆ ಮಂಗಳೂರು ಬೆಂಗರೆ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾದ ಬಗ್ಗೆ ಮಾಹಿತಿ ತಿಳಿದುಬಂದಿತ್ತು. ಮಗನ (Son Death)ಸಾವಿನಿಂದ ಕುಗ್ಗಿ ಹೋಗಿದ್ದ ತಂದೆ (Father)ಲೋಕೇಶ್ 32 ದಿನಗಳ ಬಳಿಕ ಆತ್ಮಹತ್ಯೆಗೆ( Suicide)ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಕೇರಳ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಲೋಕೇಶ್ (52) ಮಾನಸಿಕವಾಗಿ ತುಂಬಾ ಕುಗ್ಗಿದ್ದರು ಎನ್ನಲಾಗಿದೆ. ಮೊನ್ನೆ ಆಗಸ್ಟ್ 13ರಂದು ತಮ್ಮ ಸುತ್ತಮುತ್ತಲಿನ ಕೆಲ ಮಂದಿಗೆ ಮೊಬೈಲ್ ಮೂಲಕ ವಾಟ್ಸಾಪ್ ನಲ್ಲಿ ಸಂದೇಶ ಕಳುಹಿಸಿದ್ದಾರೆ. ನಾನು ಈಗ ಸೋಮೇಶ್ವರಕ್ಕೆ ಹೋಗಿ ಸಮುದ್ರಕ್ಕೆ ಹಾರುತ್ತೇನೆ. ನನ್ನ ಹೆಣ ಉಳ್ಳಾಲದಲ್ಲಿ ಸಿಗಬಹುದು. ನಾನು ಮೊಬೈಲ್ ಅನ್ನು ಮನೆಯಲ್ಲೇ ಇಟ್ಟು ತೆರಳುತ್ತಿದ್ದೇನೆ ಎಂಬ ಸಂದೇಶ ಕಳುಹಿಸಿದ್ದರಂತೆ.
ಸುತ್ತಮುತ್ತಲಿನ ಮಂದಿ ಈ ವಿಚಾರ ತಿಳಿದು ಮನೆ ಮಂದಿಗೆ ಸ್ಥಳೀಯರು ಕರೆ ಮಾಡಿದಾಗ ಮನೆಯವರಿಗೆ ವಿಚಾರ ತಿಳಿದು ಮೊಬೈಲ್ ಮನೆಯಲ್ಲೇ ಇರಿಸಿ ಹೋಗಿರುವುದು ಗೊತ್ತಾಗಿದೆ. ಹೀಗಾಗಿ ಮನೆಯವರು ಉಳ್ಳಾಲ ಠಾಣೆಗೆ ಮೊಬೈಲ್ ಇರಿಸಿ ಹೋಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೋಲಿಸರು(Police) ತನಿಖೆ ನಡೆಸಿದ ಸಂದರ್ಭ ಮೃತದೇಹ ಮಂಗಳವಾರ ಬೆಳಿಗ್ಗೆ ಉಳ್ಳಾಲ ಕಡಲ ಕಿನಾರೆಯಲ್ಲಿ ದೊರೆತಿದೆ ಎನ್ನಲಾಗಿದೆ.ಮಂಗಳವಾರ ಲೋಕೇಶ್ ಅವರ ಮೃತದೇಹ ಉಳ್ಳಾಲದಲ್ಲಿ ಮೀನುಗಾರರಿಗೆ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಆ ಬಳಿಕ ಮೃತದೇಹವನ್ನು ಉಳ್ಳಾಲ ಪೊಲೀಸರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಮೃತದೇಹವನ್ನು ಮನೆಯವರಿಗೆ ಹಸ್ತಾಂತರಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಪಿಂಚಣಿಯಲ್ಲಿ ಸರ್ಕಾರದ ಪಾಲು 14 % ಗೆ ಏರಿಕೆ ?! ಮಹತ್ವದ ನಿರ್ಧಾರದ ಕಡೆ ಕೇಂದ್ರ
