Home » ಉಪ್ಪಿನಂಗಡಿ : ಮನೆಯೊಂದರಿಂದ ಅಡಿಕೆ ಕಳ್ಳತನ | ಇಬ್ಬರು ಆರೋಪಿಗಳ ಬಂಧನ

ಉಪ್ಪಿನಂಗಡಿ : ಮನೆಯೊಂದರಿಂದ ಅಡಿಕೆ ಕಳ್ಳತನ | ಇಬ್ಬರು ಆರೋಪಿಗಳ ಬಂಧನ

by Praveen Chennavara
0 comments

ಉಪ್ಪಿನಂಗಡಿ: ಠಾಣಾ ವ್ಯಾಪ್ತಿಯ ಬಿಳಿಯೂರು ಎಂಬಲ್ಲಿ ಮನೆಯೊಂದರಿಂದ ಅಡಿಕೆ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತರನ್ನು ಪುತ್ತೂರು ಕೃಷ್ಣ ನಗರ ನಿವಾಸಿ ವಿನಯ ಕುಮಾರ್ (31)ಹಾಗೂ ಕೆಮ್ಮಾಯಿ ನಿವಾಸಿ ಮಹಮ್ಮದ್ ಜುನೈದ್(24) ಎಂದು ಗುರುತಿಸಲಾಗಿದೆ.

ಬಿಳಿಯೂರು ನೇಂಜ ಎಂಬಲ್ಲಿನ ವಸಂತ ದೇವಾಡಿಗ ಎಂಬವರ ಮನೆಯಂಗಳದಲ್ಲಿ ಒಣಗಳು ಹಾಕಿದ್ದ ಅಡಿಕೆಯನ್ನು ರಾತ್ರಿ ವೇಳೆಯಲ್ಲಿ ಖದೀಮರು ಕಳವುಗೈದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಜನವರಿ 11 ರಂದು ರಾತ್ರಿ ನಡೆದ ಕಳವು ಕೃತ್ಯದ ಬೆನ್ನಟ್ಟಿದ ಉಪ್ಪಿನಂಗಡಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಕೃತ್ಯಕ್ಕೆ ಬಳಸಲಾದ ಆಟೋ ರಿಕ್ಷಾ ಹಾಗೂ ಕಳವು ಗೈದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಠಾಣೆಯ ಠಾಣಾಧಿಕಾರಿಗಳಾದ ಕುಮಾರ್, ಓಮನ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

You may also like

Leave a Comment