Home » ಉಪ್ಪಿನಂಗಡಿ : ಆತ್ಮಹತ್ಯೆಗೆ ಯತ್ನಿಸಿದ ಕೊಡಿಪಾಡಿಯ ಯುವಕನ ರಕ್ಷಣೆ

ಉಪ್ಪಿನಂಗಡಿ : ಆತ್ಮಹತ್ಯೆಗೆ ಯತ್ನಿಸಿದ ಕೊಡಿಪಾಡಿಯ ಯುವಕನ ರಕ್ಷಣೆ

by Praveen Chennavara
0 comments

ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ಸೇತುವೆಯ ಮೇಲಿಂದ ನದಿಗೆ ಹಾರಿ ಆತ್ಮಹತ್ಯೆಗೈಯಲು ಯತ್ನಿಸಿದ ಯುವಕನನ್ನು ತಂಡವೊಂದು ತಡೆದು ಆತನನ್ನು ಪೊಲೀಸರಿಗೊಪ್ಪಿಸಿದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.

ಪುತ್ತೂರಿನ ಕೊಡಿಪ್ಪಾಡಿ ಮನೆ ನಿವಾಸಿ ನಾಗೇಶ (23) ಎಂಬಾತ ಗುರುವಾರ ನೇತ್ರಾವತಿ ಸೇತುವೆಯಲ್ಲಿ ಅಲೆದಾಡುತ್ತಿದ್ದುದ್ದನ್ನು ಕಂಡ ಇಳಂತಿಲದ ಯು.ಟಿ. ಫಯಾಝ್, ರಶೀದ್ ಮತ್ತು ಇಕ್ಬಾಲ್ ಎಂಬವರು ಸೇತುವೆಯತ್ತ ಧಾವಿಸಿದ್ದರು. ಈ ವೇಳೆ ಆತ ನದಿಗೆ ಹಾರಲು ಮುಂದಾಗುತ್ತಿದ್ದಂತೆಯೇ ಆತನನ್ನು ಹಿಡಿದು ಪೊಲೀಸರಿಗೊಪ್ಪಿಸಿದರು.

ಯುವಕ ತನ್ನ ಕಿಸೆಯಲ್ಲಿ ಚೀಟಿಯೊಂದನ್ನು ಇರಿಸಿದ್ದು, ಮನೆಯಲ್ಲಿ ತನಗೆ ಬೈಯುತ್ತಿದ್ದ ಹಿನ್ನೆಲೆಯಲ್ಲಿ ಮನನೊಂದು ಈ ಕೃತ್ಯವೆಸಗಲು ಮುಂದಾಗಿದ್ದನೆನ್ನಲಾಗಿದೆ. ದೈವ ನರ್ತನ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದ ಈತನಿಗೆ ಪೊಲೀಸರು ಬುದ್ದಿವಾದ ಹೇಳಿ ಮನೆಯವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.

You may also like

Leave a Comment