Home » ಉಪ್ಪಿನಂಗಡಿ : ಅಡಿಕೆ, ತೆಂಗಿನಕಾಯಿ ಸಂಗ್ರಹಿಸಿಟ್ಟಿದ್ದ ಕೊಟ್ಟಿಗೆ ಬೆಂಕಿಗೆ ಆಹುತಿ , ಲಕ್ಷಾಂತರ ನಷ್ಟ

ಉಪ್ಪಿನಂಗಡಿ : ಅಡಿಕೆ, ತೆಂಗಿನಕಾಯಿ ಸಂಗ್ರಹಿಸಿಟ್ಟಿದ್ದ ಕೊಟ್ಟಿಗೆ ಬೆಂಕಿಗೆ ಆಹುತಿ , ಲಕ್ಷಾಂತರ ನಷ್ಟ

by Praveen Chennavara
0 comments

ಉಪ್ಪಿನಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಬಳಿ, ಹೋಟೆಲ್ ಆದಿತ್ಯ ಹಿಂಭಾಗದಲ್ಲಿರುವ ಸೂರಂಬೈಲ್ ಶಾಂತಾರಾಮ್ ಭಟ್ ಎಂಬವರಿಗೆ ಸೇರಿದ ಅಡಿಕೆ, ತೆಂಗಿನ ಕಾಯಿ ಸಂಗ್ರಹಿಸಿಟ್ಟಿದ್ದ ಕೊಟ್ಟಿಗೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗನೆ ಹೊತ್ತಿ ಉರಿಯಲಾರಂಬಿಸಿ, ಅದರಲ್ಲಿದ್ದ ಸುಟ್ಟು ಕರಕಲಾಗಿದೆ.

ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರಿಸುವ ಯಂತ್ರ ಈ ಕಟ್ಟಡದಲ್ಲಿದ್ದು ನೆನ್ನೆ ಸಂಜೆವರೆಗೂ ಅದರಲ್ಲಿ ಕೆಲಸ ಮಾಡಲಾಗಿತ್ತು. ಅದರಿಂದ ಹಾರಿರಬಹುದಾದ ಕಿಡಿ ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಗಿರಬಹುದೆಂದು ಸಂಶಯಿಸಲಾಗಿದೆ. ಇಂದು ಬೆಳಗಿನ ಜಾವದಷ್ಟರಲ್ಲಿ ಬೆಂಕಿಯ ಕೆನ್ನಾಲಗೆ ಮುಗಿಲೆತ್ತರಕ್ಕೆ ಚಾಚಿದ್ದು, ಸಕಾಲದಲ್ಲಿ ಆಗಮಿಸಿದ ಪುತ್ತೂರು ಅಗ್ನಿಶಾಮಕ ದಳದವರು ಬೆಂಕಿ ಆರಿಸುವಲ್ಲಿ ಯಶಸ್ವಿ ಆದರಾದರೂ ಅಷ್ಟರಲ್ಲೇ ಬೆಂಕಿ ತನ್ನ ಕೆಲಸ ಮುಗಿಸಿತ್ತು.

You may also like

Leave a Comment