Home » ವಿಟ್ಲ: ಪೋಷಕರು ಬುದ್ಧಿಮಾತಿಗೆ ಬೈದರೆಂದು ಆತ್ಮಹತ್ಯೆಗೆ ಶರಣಾದ ಬಾಲಕ

ವಿಟ್ಲ: ಪೋಷಕರು ಬುದ್ಧಿಮಾತಿಗೆ ಬೈದರೆಂದು ಆತ್ಮಹತ್ಯೆಗೆ ಶರಣಾದ ಬಾಲಕ

0 comments

ಪೋಷಕರು ಬುದ್ಧಿವಾದ ಹೇಳಿದ್ದರೆಂಬ ಕಾರಣಕ್ಕೆ ನೊಂದ ಬಾಲಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆಯೊಂದು ವಿಟ್ಲ ಸಮೀಪದ ಪುಚ್ಚೆಗುತ್ತು ಎಂಬಲ್ಲಿಂದ ವರದಿಯಾಗಿದೆ.

ಮೃತ ಬಾಲಕನನ್ನು ಜೋಗಿಬೆಟ್ಟು ನಿವಾಸಿ ವಾಮನ ಪೂಜಾರಿ ಎಂಬವರ ಪುತ್ರ ಉಜ್ವಲ್(14) ಎಂದು ಗುರುತಿಸಲಾಗಿದೆ. ಅತಿಯಾಗಿ ಟಿ.ವಿ ನೋಡುತ್ತಿದ್ದ ಉಜ್ವಲ್ ನಿಗೆ ಪೋಷಕರು ಬುದ್ಧಿ ಹೇಳಿದ್ದು, ಇದನ್ನೇ ಮನಸ್ಸಿಗೆ ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

You may also like

Leave a Comment