Home » ವಿಟ್ಲ: ಮದುವೆ ಪ್ರಯುಕ್ತ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ ಹಿಂದೂ ಯುವಕ!

ವಿಟ್ಲ: ಮದುವೆ ಪ್ರಯುಕ್ತ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ ಹಿಂದೂ ಯುವಕ!

0 comments

ಬಂಟ್ವಾಳ : ಹಿಂದೂ ಯುವಕನೋರ್ವ ತನ್ನ ವಿವಾಹದ ಪ್ರಯುಕ್ತ ಮುಸ್ಲಿಮರಿಗೆ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿ ಆದರ್ಶ ಮೆರೆದಿದ್ದಾನೆ.

ಬೈರಿಕಟ್ಟೆಯ ಗೆಳೆಯರ ಬಳಗ ಸದಸ್ಯರಾಗಿರುವ ಚಂದ್ರಶೇಖರ ಜೆಡ್ಡು ಅವರ ವಿವಾಹ ಎ.24ರಂದು ನೆರವೇರಿದೆ. ಆದರೆ ಮದುವೆಗೆ ಆಗಮಿಸಿದ ಮುಸ್ಲಿಮ್ ಗೆಳೆಯರಿಗೆ ರಂಝಾನ್ ಕಾರಣ ಔತಣ ಸ್ವೀಕರಿಸಲು ಆಗಲಿಲ್ಲ. ಹಾಗಾಗಿ ಮದುಮಗ ಚಂದ್ರಶೇಖರರಿಗೆ ಇದೊಂದು ಬೇಸರವಿತ್ತು. ಈ ಕಾರಣದಿಂದಾಗಿ ಚಂದ್ರಶೇಖರ್ ತನ್ನ ಊರಿನ ಎಲ್ಲಾ ಮುಸ್ಲಿಮರಿಗೆ ಮದುವೆ ಪ್ರಯುಕ್ತ ಬೈರಿಕಟ್ಟೆ ಜುಮಾ ಮಸೀದಿಯಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ್ದರು.

ಇಫ್ತಾರ್ ಕೂಟವನ್ನು ಏರ್ಪಡಿಸಿದ ನವ ವಿವಾಹಿತ ಚಂದ್ರಶೇಖರ್ ಅವರನ್ನು ಜಲಾಲಿಯಾ ಜುಮಾ ಮಸೀದಿ ಮತ್ತು ಮವೂನತುಲ್ ಇಸ್ಲಾಮ್ ಯುವಜನ ಕಮಿಟಿಯ ಅಧ್ಯಕ್ಷ ಪದಾಧಿಕಾರಿಗಳು, ಮಸೀದಿಯ ಧರ್ಮಗುರುಗಳ ಮುಖಾಂತರ ಸನ್ಮಾನಿಸಿ ಹರಸಿದರು.

You may also like

Leave a Comment