Home » ಬಂಟ್ವಾಳ : ಮನೆಯೊಂದರಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಕಳ್ಳರು | ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

ಬಂಟ್ವಾಳ : ಮನೆಯೊಂದರಲ್ಲಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ ಕಳ್ಳರು | ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

0 comments

ಬಂಟ್ವಾಳ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಿಂಬಾಗಿಲು ಒಡೆದು ದರೋಡೆಗೆ ವಿಫಲ ಯತ್ನ ನಡೆಸಿದ‌ ಘಟನೆ ಭಾನುವಾರ ಬೆಳಕಿಗೆ ಬಂದಿದೆ.

ವಿದೇಶದಲ್ಲಿ ಕೆಲಸದಲ್ಲಿರುವ ಅಜ್ಕಿನಡ್ಕ ನಿವಾಸಿ ಮಹಮ್ಮದ್ ಆಲಿ‌ ಮಣಿಲಂ ಅವರಿಗೆ ಸೇರಿದ ಮನೆಯ ಹಿಂಬದಿಯ ಬಾಗಿಲನ್ನು ಪಿಕ್ಕಾಸು ಬಳಸಿ ಮುರಿದಿದ್ದು, ಇಬ್ಬರು ಮನೆಯ ಒಳಗೆ ಹೋಗಿ ದರೋಡೆ‌ಗೆ ಯತ್ನ ಮಾಡಿದ್ದಾರೆ.

ಐಷರಾಮಿ ಮನೆಯಲ್ಲಿರುವ ಸಿಸಿಕ್ಯಾಮೆರಾ ವಿದೇಶದಲ್ಲಿರುವ ಮನೆ ಮಾಲೀಕ ಆಲಿ ಅವರ ದೂರವಾಣಿಗೆ ಸಂಪರ್ಕದಲ್ಲಿದೆ‌. ಇದನ್ನು ಗಮನಿಸುವ ಸಂದರ್ಭ ಎರಡು ಸಿಸಿ ಕ್ಯಾಮರಾಗಳು ಆಕಾಶದ ಕಡೆಗೆ ಮುಖ ಮಾಡಿರುವುದು ಕಾಣಿಸಿದ್ದರಿಂದ ಮನೆ ಮಂದಿಯಲ್ಲಿ ವಿಚಾರಿಸಿದಾಗ, ಮನೆಯಿಂದ ಹೊರಗಿದ್ದವರು ಮನೆಗೆ ಬಂದು ಪರಿಶೀಲನೆ ನಡೆಸಿದಾಗ ಈ ಕೃತ್ಯ ನಡೆದಿರುವುದು ತಿಳಿದು ಬಂದಿದೆ.

ಫೆ.27 ರ ಬೆಳಗ್ಗಿನ ಜಾವ 1 ರಿಂದ 2 ಗಂಟೆ ನಡುವಿನಲ್ಲಿ ಇಬ್ಬರು ಮನೆಯ ಒಳಗೆ ಬಂದು ಪರಿಶೀಲನೆ ಮಾಡಿದ ದೃಶ್ಯಗಳು ಇತ್ತು.

ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

You may also like

Leave a Comment