Home » Kaniyur: ಕಾಣಿಯೂರು: ಕೃಷಿ ಪಂಪ್‌ ಸ್ವಿಚ್‌ ಆನ್‌ ಮಾಡಲು ಹೋಗಿ ವಿದ್ಯುತ್‌ ಶಾಕ್‌: ಮಹಿಳೆ ಸಾವು

Kaniyur: ಕಾಣಿಯೂರು: ಕೃಷಿ ಪಂಪ್‌ ಸ್ವಿಚ್‌ ಆನ್‌ ಮಾಡಲು ಹೋಗಿ ವಿದ್ಯುತ್‌ ಶಾಕ್‌: ಮಹಿಳೆ ಸಾವು

by Mallika
0 comments

Kaniyur: ಸೋಮವಾರ ಮಧ್ಯಾಹ್ನ ತೋಟದ ಕೃಷಿ ಪಂಪ್‌ ಚಾಲನೆ ಮಾಡಲು ಹೋದ ಮಹಿಳೆಯೊಬ್ಬರು ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟ ಘಟನೆ ದೋಳ್ಪಾಡಿ ಗ್ರಾಮದ ಕೂರೇಲು ಎಂಬಲ್ಲಿ ನಡೆದಿದೆ.

 

ಮೃತರನ್ನು ಕೂರೇಲು ನಿವಾಸಿ ಪುರಂದರ ಅವರ ಪತ್ನಿ ಜಲಜಾಕ್ಷಿ (38) ಎಂದು ಗುರುತಿಸಲಾಗಿದೆ.

 

ಮಧ್ಯಾಹ್ನ 2.30 ರ ವೇಳೆ ಜಲಜಾಕ್ಷಿ ಅವರು ತಮ್ಮ ಮನೆಯ ಸಮೀಪದ ತೋಟದಲ್ಲಿ ಅಡಿಕೆ ಬೆಳೆಗೆ ನೀರು ಹಾಕಲೆಂದು ಕೃಷಿ ಪಂಪ್‌ನ ಸ್ವಿಚ್‌ ಆನ್‌ ಮಾಡಲು ಹೋಗಿದ್ದು, ಅನಿರೀಕ್ಷಿತವಾಗಿ ವಿದ್ಯುತ್‌ ಪ್ರವಹಿಸಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸಮೀಪದ ಕಾಣಿಯೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆ ತಲುಪವಷ್ಟರಲ್ಲಿ ಅವರು ಮೃತ ಹೊಂದಿದ್ದಾರೆ ಎಂದು ವರದಿಯಾಗಿದೆ.

 

ಘಟನೆಯ ಕುರಿತು ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತಿ ಪುರಂದರ, 6,3 ನೇ ತರಗತಿಯಲ್ಲಿ ಓದುತ್ತಿರುವ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

You may also like