Home » ಯೋಗ ಕ್ಷೇತ್ರದಲ್ಲಿ ಅಂತರ್ ರಾಜ್ಯ ಮಟ್ಟದಲ್ಲಿ ಸಾನ್ವಿ ಡಿ ರವರಿಗೆ ಚಿನ್ನದ ಪದಕ

ಯೋಗ ಕ್ಷೇತ್ರದಲ್ಲಿ ಅಂತರ್ ರಾಜ್ಯ ಮಟ್ಟದಲ್ಲಿ ಸಾನ್ವಿ ಡಿ ರವರಿಗೆ ಚಿನ್ನದ ಪದಕ

by Praveen Chennavara
0 comments

ವರ್ಷಿಣಿ ಯೋಗ ಎಜುಕೇಶನ್ ಮತ್ತು ಕಲ್ಚರಲ್ ಸ್ಪೋರ್ಟ್ಸ್ ಟ್ರಸ್ಟ್ ಶಿವಮೊಗ್ಗ ಮತ್ತು ಧ್ಯಾನ ಜ್ಯೋತಿ ಯೋಗ ಎಜುಕೇಷನ್ ಸ್ಪೋರ್ಟ್ಸ್ ಸೋಶಿಯಲ್ ಮತ್ತು ಕಲ್ಚರಲ್ ಚಾರಿಟೇಬಲ್ ಟ್ರಸ್ಟ್ ಹುಬ್ಬಳ್ಳಿ ಇವರ ಸಹಯೋಗದಲ್ಲಿ ನಡೆದ ಅಂತ ರಾಜ್ಯ ಆನ್ಲೈನ್ ಯೋಗಾಸನಾ ಚಾಂಪಿಯನ್ ಶಿಪ್ ನಲ್ಲಿ ಸಾನ್ವಿ ಡಿ ದೊಡ್ಡಮನೆ ಪಂಜ ಇವರು ಪ್ರಥಮ ಸ್ಥಾನ ದಲ್ಲಿ ಚಿನ್ನದ ಪದಕ ಪಡೆದು ಜನವರಿಯಲ್ಲಿ ಅಂಡಮಾನ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಗುರುಗಳಾದ ಶರತ್ ಮರ್ಗಿಲಡ್ಕ ಇವರಿಂದ ಯೋಗಾಭ್ಯಾಸ ವನ್ನು ಪಡೆಯುತ್ತಿದ್ದಾರೆ.

ಇವರು ಕಡಬ ಕ್ನಾನಾಯ ಜ್ಯೋತಿ ಇಂಗ್ಲೀಷ್ ಮೀಡಿಯಂ ಪ್ರೌಢಶಾಲಾ 4ನೇ ತರಗತಿಯಲ್ಲಿ ಓದುತ್ತಿರುವ ಇವರು ಕಡಬ ಮೂಕಾಂಬಿಕಾ ಮಾರುತಿ ಗ್ಯಾರೇಜ್ ನ ಮಾಲೀಕರಾದ ನಿತ್ಯಾನಂದ ಗೌಡ ಮತ್ತು ಸೀತಾಲಕ್ಷ್ಮೀ ದೊಡ್ಡಮನೆ ಪಂಜ ಇವರ ಪುತ್ರಿ.

You may also like

Leave a Comment