Home » Puttur: ನದಿಯಲ್ಲಿ ಮುಳುಗಿ ಯುವಕ ಮೃತ್ಯು

Puttur: ನದಿಯಲ್ಲಿ ಮುಳುಗಿ ಯುವಕ ಮೃತ್ಯು

1 comment
Puttur

Puttur: ನದಿಯಲ್ಲಿ ಮುಳುಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಉಪ್ಪಿನಂಗಡಿ ಬಳಿಯ ಹಳೆಗೇಟು ಎಂಬಲ್ಲಿ ಮಾ.24ರಂದು ನಡೆದಿದೆ.

ಇದನ್ನೂ ಓದಿ: Crocodile inside the python: 18 ಅಡಿ ಉದ್ದದ ಹೆಬ್ಬಾವಿನ ಹೊಟ್ಟೆಯೊಳಗೆ ಮೊಸಳೆ ಪತ್ತೆ

ಕೊಳ್ತಿಗೆ ಗ್ರಾಮದ ಪಾಲ್ತಾಡು ನಿವಾಸಿ ಮಂಜುನಾಥ್ (35) ಮೃತ ವ್ಯಕ್ತಿ.

ಬಿಳಿಯೂರು ಅಣೆಕಟ್ಟಿನಿಂದಾಗಿ ಹಳೆಗೇಟು ಬಳಿ ನೇತ್ರಾವತಿ ನದಿಯಲ್ಲಿ ನೀರು ತುಂಬಿಕೊಂಡಿದ್ದು, ನದಿಯ ಆಳ ತಿಳಿಯದೇ ನದಿಗೆ ಇಳಿದಿದ್ದ ಇವರು ನೀರಿನಲ್ಲಿ ಮುಳುಗಿದರು. ಆಗ ಅವರೊಂದಿಗಿದ್ದವರು ಬೊಬ್ಬೆ ಹಾಕಿದ್ದು, ಅಕ್ಕಪಕ್ಕದಲ್ಲಿದ್ದವರು ಓಡಿ ಬಂದು ಹಗ್ಗದ ಸಹಾಯದಿಂದ ನದಿ ನೀರಿಗಿಳಿದು ಇವರನ್ನು ಮೇಲೆತ್ತಿ ತಂದು ಪ್ರಥಮ ಚಿಕಿತ್ಸೆಯ ಬಳಿಕ ಪುತ್ತೂರು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Actress Kiara Advani: ಟಾಕ್ಸಿಕ್’ನಲ್ಲಿ ಯಶ್ ಜೋಡಿಯಾಗಿ ನಟಿ ಕಿಯಾರಾ ಅಡ್ವಾನಿ ಆಯ್ಕೆಯಾಗುವ ಸಾಧ್ಯತೆ

ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

You may also like

Leave a Comment