Tractor accident: ಬೆಂಗಳೂರು : ವಾಟರ್ ಟ್ರ್ಯಾಕ್ಟರ್ ಹರಿದು 4 ವರ್ಷದ ಬಾಲಕ ಸಾವನ್ನಪ್ಪಿದ ಘಟನೆಯೊಂದು (Tractor accident) ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸಿಕೆ ಪಾಳ್ಯದಲ್ಲಿ ನಡೆದಿದೆ.
ವಾಟರ್ ಟ್ರ್ಯಾಕ್ಟರ್ ಹರಿದು ಭುವನ್ ಮೃತಪಟ್ಟ ಬಾಲಕ ಎಂದು ಗುರುತಿಸಲಾಗಿದೆ. ಈ ಬಾಲಕ ಐಸ್ಕ್ರೀಂ ಕೊಳ್ಳಲು ಬೇಕರಿಗೆ ಬಂದಾಗ ಈ ದುರ್ಘಟನೆ ನಡೆದಿದೆ.
ಬೇಕರಿಗಾಗಿ ರಸ್ತೆ ದಾಟುವಾಗ ವೇಗವಾಗಿ ಎದುರಿಗೆ ಬಂದ ವಾಟರ್ ಟ್ರ್ಯಾಕ್ಟರ್ ಬಾಲಕ ಮೇಲೆ ಹರಿದಿದ್ದು, ತಕ್ಷಣವೇ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಕಿತ್ಸೆಗಾಗಿ ಆಸ್ಪತ್ರೆ ತಲುಪುತ್ತಿದ್ದಂತೆ ಕೊನೆಯುಸಿರೆಳೆದಿದ್ದಾನೆ.
ವಾಟರ್ ಟ್ರ್ಯಾಕ್ಟರ್ ಚಾಲಕ ಕಂಠಪೂರ್ತಿಕುಡಿದು ಟ್ರ್ಯಾಕ್ಟರ್ ಚಲಾಯಿಸಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಪಘಾತಗೊಂಡ ಕೂಡಲೇ ಸ್ಥಳದಲ್ಲೇ ಟ್ರ್ಯಾಕ್ಟರ್ ಬಿಟ್ಟು ಚಾಲಕ ಎಸ್ಕೇಪ್ ಆಗಿದ್ದಾನೆ. 4 ವರ್ಷದ ಬಾಲಕನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.