Home » Harassement: ಮಧ್ಯರಾತ್ರಿ ಕಸ ಎಸೆಯಲೆಂದು ಹೋದ ಯುವತಿಯ ತಬ್ಬಿ ಹಿಡಿದು, ಖಾಸಗಿ ಭಾಗ ಮುಟ್ಟಿದ ಪುಂಡರು

Harassement: ಮಧ್ಯರಾತ್ರಿ ಕಸ ಎಸೆಯಲೆಂದು ಹೋದ ಯುವತಿಯ ತಬ್ಬಿ ಹಿಡಿದು, ಖಾಸಗಿ ಭಾಗ ಮುಟ್ಟಿದ ಪುಂಡರು

by ಹೊಸಕನ್ನಡ
0 comments
Harassement

Bangalore: ರಾತ್ರಿ ವೇಳೆ ಕಸ ಎಸೆಯೋದಿಕ್ಕೆ ಎಂದು ಹೋಗಿದ್ದ ಯುವತಿಯನ್ನು ಕಿಡಿಗೇಡಿಗಳು ತಬ್ಬಿ, ಖಾಸಗಿ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಘಟನೆಯೊಂದು ಕೋರಮಂಗಲದಲ್ಲಿ ನಡೆದಿರುವ ಕುರಿತು ವರದಿಯಾಗಿದೆ. ಈ ಘಟನೆ ಫೆ.28 ರಂದು ನಡೆದಿದೆ.

ಇದನ್ನೂ ಓದಿ: Traffic Police: ಟ್ರಾಫಿಕ್ ನಿಯಮ ಉಲ್ಲಂಘನೆ : ವ್ಯಕ್ತಿಯಿಂದ ₹49,100 ದಂಡ ವಸೂಲಿ ಮಾಡಿದ ಬೆಂಗಳೂರು ಪೊಲೀಸರು

ಬೆಂಗಳೂರಿನಲ್ಲಿ ವಾಸವಿರುವ ಜನರು ಹಸಿ ಮತ್ತು ಒಣ ಕಸವನ್ನು ಬೇರೆ ಬೇರೆ ಮಾಡಿ ಕೊಡಬೇಕೆಂಬ ನಿಯಮ ಇದೆ. ಬೆಳಗ್ಗೆ ಕೆಲವರು 6 ಗಂಟೆಗೆ ಕೆಲಸಕ್ಕೆಂದು ಹೋದರೆ, ಸಂಜೆ ಸಮಯ ವಾಪಸ್ಸು ಬರುತ್ತಾರೆ. ಅಂತಹ ಜನರು ರಸ್ತೆಬದಿ ಅಥವಾ ಕಾಲುವೆಗಳ ಬಳಿ ಇರುವ ಸ್ಥಳದಲ್ಲಿ ಕಸ ಎಸೆದು ಹೋಗುತ್ತಾರೆ. ಅಂತಹುವುದೇ ಒಂದು ಘಟನೆ ಕೋರಮಂಗಲದಲ್ಲಿ ನಡೆದಿದೆ. ಕೋರಮಂಗಲದ ಆಟೋ ನಿಲ್ದಾಣದ ಬಳಿ ಇರುವ ಜಾಗದಲ್ಲಿ ಕಸ ಎಸೆಯಲೆಂದು ಹೋಗಿದ್ದ ಯುವತಿಗೆ ಲೈಂಗಿಕ ಕಿರುಕುಳ ಅನುಭವಿಸಿರುವ ಕುರಿತು ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ.

ಯುವತಿಯೋರ್ವಳು ಅಂದು ಮಧ್ಯರಾತ್ರಿ ತನ್ನ ಸ್ನೇಹಿತನೊಂದಿಗೆ ಕಸ ಎಸೆಯಲೆಂದು ಹೋಗಿದ್ದಳು. ಆದರೆ ಆಟೋ ಸ್ಟ್ಯಾಂಡ್‌ ಬಳಿ ಕುಳಿತಿದ್ದ ಪುಂಡರ ಗುಂಪೊಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವಕ-ಯುವತಿಯನ್ನು ಹಿಂಬಾಲಿಸಿದ್ದು, ನಿರ್ಜನ ಪ್ರದೇಶದಲ್ಲಿ ಕಸ ಎಸೆದು ವಾಪಾಸ್‌ ಬರುವಾಗ ಅವರ ಗುಂಪಿನಲ್ಲಿದ್ದ ನಾಲ್ವರು ಯುವತಿಯನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ತಡೆಯಲು ಬಂದ ಸ್ನೇಹಿತನಿಗೆ ಚೆನ್ನಾಗಿ ಥಳಿಸಿದ್ದಾರೆ. ಯುವತಿಯ ಬಾಯಿ ಮುಚ್ಚಿ, ಆಕೆಯ ಖಾಸಗಿ ಅಂಗಗಳನ್ನು ಕೆಟ್ಟದಾಗಿ ಸ್ಪರ್ಶ ಮಾಡಿದ್ದಾರೆ. ಪ್ರತಿರೋಧ ತೋರಿದ ಯುವತಿಗೆ ಹಲ್ಲೆ ಮಾಡಿದ್ದಾರೆ. ಕೂಡಲೇ ಯುವಕ ರಕ್ಷಣೆಗೆಂದು ಕೂಗಿದ್ದಾನೆ. ಆತನಿಗೆ ಥಳಿಸಿ ಇಬ್ಬರನ್ನೂ ಬಿಟ್ಟು ಪರಾರಿಯಾಗಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಪಡೆದ ನಂತರ ಇಬ್ಬರು ಆಡುಗೋಡಿ ಪೊಲೀಸ್‌ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಆಧರಿಸಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಯುವತಿಗೆ ಲೈಂಗಿಕ ಕಿರುಕುಳ ನೀಡಿದ ನಾಲ್ವರು ಕೂಡ ಅಪ್ರಾಪ್ತ ಬಾಲಕರು ಎಂದು ತಿಳಿದುಬಂದಿದೆ.

You may also like

Leave a Comment